ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ

Update: 2021-01-18 14:32 GMT

ಉಡುಪಿ, ಜ.18: ನೂತನವಾಗಿ ಆಯ್ಕೆಯಾಗಿರುವ ಗ್ರಾಪಂ ಸದಸ್ಯರು ಮೌಲ್ಯಯುತ ಸೇವೆಯನ್ನು ಜನತೆಗೆ ನೀಡುವತ್ತ ಗಮನಹರಿಸಬೇಕು ಎಂದು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ರೆಕ್ಟರ್ ವಂ.ವಲೇರಿಯನ್ ಮೆಂಡೊನ್ಸಾ ಹೇಳಿದ್ದಾರೆ.

ಕೆಥೊಲಿಕ್ ಸಭಾ ಕಲ್ಯಾಣಪುರ ವಲಯ ಸಮಿತಿ ವತಿಯಿಂದ ಮಿಲಾಗ್ರಿಸ್ ಟ್ರೈ ಸೆಂಟಿನರಿ ಸಭಾಂಗಣದಲ್ಲಿ ರವಿವಾರ ಆಯೋಜಿಸ ಲಾದ ಗ್ರಾಪಂ ಚುನಾ ವಣೆಗೆ ಸ್ಪರ್ಧಿಸಿದ ಕ್ರೈಸ್ತ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಯಾವುದೇ ಸ್ಪರ್ಧೆಯಿರಲಿ ಗೆಲುವು ಮತ್ತು ಸೋಲು ಇದ್ದೇ ಇದೆ. ಅದರಂತೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಅವರು ನೀಡುವ ಸೇವೆಯನ್ನು ನಿಲ್ಲಿಸದೆ ಮುಂದುವರೆಸಬೇಕು. ಅಲ್ಲದೆ ಗೆದ್ದ ಅಭ್ಯರ್ಥಿ ಗಳು ಇನ್ನಷ್ಟು ಪರಿಣಾಮ ಕಾರಿಯಾಗಿ ತನ್ನ ಗ್ರಾಮದ ಜನತೆಗೆ ಸೇವೆಯನ್ನು ನೀಡುವತ್ತ ಮುಂದುವರೆಯಬೇಕು. ಮೌಲ್ಯಯುತ ಮತ್ತು ಪ್ರಾಮಾಣಿಕ ಸೇವೆಯನ್ನು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕಲ್ಯಾಣಪುರ ವಲಯ ವ್ಯಾಪ್ತಿಯಲ್ಲಿ ಸ್ಪರ್ಧಿಸಿದ 42 ಅಭ್ಯರ್ಥಿಗಳನ್ನು ಗೌರವಿಸಲಾಯಿತು. ಕೆಥೊಲಿಕ್ ಸಭಾ ಕಲ್ಯಾಣಪುರ ವಲಯಾಧ್ಯಕ್ಷೆ ರೋಜಿ ಬಾರೆಟ್ಟೊ ಅಧ್ಯಕ್ಷತೆ ವಹಿಸಿದ್ದರು. ವಲಯ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಕರ್ನೆಲಿಯೋ, ಕೋಶಾಧಿಕಾರಿ ಉರ್ಬಾನ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸೆಲಿನ್ ಕುಲಾಸೊ ವಂದಿಸಿದರು. ಎಡ್ವರ್ಡ್ ಲಾರ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News