ವಿಟ್ಲದ ಎಸ್ಸೈ ಅಭಿನಂದನಾರ್ಹರು : ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ

Update: 2021-01-18 17:17 GMT

ವಿಟ್ಲ, ಜ. 18: ವಿಟ್ಲ ಪೊಲೀಸ್ ಠಾಣೆಯಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡ ಎಸ್ಸೈ ವಿನೋದ್ ಕುಮಾರ್ ರೆಡ್ಡಿಯವರು ತನ್ನ ಅಧಿಕಾರವಹಿಸಿದ ಆರಂಭ ದಿನಗಳಿಂದಲೇ ಉತ್ತಮ ಸಾಧನೆಯನ್ನು ಮಾಡುವ ಮುಖಾಂತರ ಎಲ್ಲರ ಗಮನ ಸೆಳೆದಿದ್ದಾರೆ.

ಅವರ ನೇಮಕಾತಿಯ ಆರಂಭಿಕ ದಿನಗಳಲ್ಲಿ ಎನ್ನಾರ್ಸಿಯ ವಿವಾದಗಳ ಸುಳಿಯಲ್ಲಿದ್ದ ಸಂದರ್ಭದಲ್ಲಿ ಕೂಡಾ ಅವರು ಇಲ್ಲಿನ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿಯುತ ಪ್ರತಿಭಟನೆಯವರೊಂದಿಗೆ ಸಹಕರಿಸಿದ್ದು ಯಾವುದೇ ರೀತಿಯ ಶಾಂತಿಭಂಗಕ್ಕೆ ಅವಕಾಶವನ್ನು ಮಾಡಿಕೊಡದೆ, ಕರ್ತವ್ಯ ನಿಷ್ಟೆಯಲ್ಲಿ ಬಹಳ ಪ್ರಾಮಾಣಿಕತೆಯನ್ನು ಮೆರೆದಿರುವ ಇವರು, ವಿಟ್ಲ ಪೊಲೀಸ್ ಠಾಣೆಯ ಸರಹದ್ದುಗಳಲ್ಲಿ ವ್ಯಾಪಕವಾಗಿದ್ದ ಮಾದಕ ದ್ರವ್ಯ ಜಾಲ ಹಾಗೂ ಅವುಗಳ ಜತೆಗೆ ನಂಟು ಹೊಂದಿರುವ ಕ್ರಿಮಿನಲ್ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿರುವುದಲ್ಲದೆ, ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಕೆಲವು ದರೋಡೆ ಪ್ರಕರಣ ಮತ್ತು ಪ್ರಹಸನಗಳನ್ನು ಕ್ಷಿಪ್ರವಾಗಿ ಭೇದಿಸಿ ಸಾಮಾಜಿಕ ನೆಮ್ಮದಿಯನ್ನು ನೀಡುವಲ್ಲಿ ಸಫಲರಾಗಿದ್ದಾರೆ.

 ಮುಖ್ಯವಾಗಿ ವಿಟ್ಲದ ಮೇಗಿನಪೇಟೆಯಲ್ಲಿನ ಪ್ರಕರಣವಾದ ಒಂಟಿ ಮಹಿಳೆಯ ಕೈಕಾಲು ಕಟ್ಟಿ ದರೋಡೆಗೆ ಯತ್ನಿಸಿದ ಪ್ರಸಂಗ, ಕಾನತ್ತಡ್ಕದಲ್ಲಿನ ಹಗಲು ಹೊತ್ತಿನಲ್ಲೇ ನಡೆದ ದರೋಡೆ ಎಂಬ ಪ್ರಚಾರ ಪಡೆದು ಜನರಲ್ಲಿ ಭೀತಿ ಹುಟ್ಟಿಸಿದ ಘಟನೆಯ ಹಿಂದಿನ  ನಾಟಕೀಯ ಪ್ರಹಸನಗಳ ವಾಸ್ತವಗಳನ್ನು ಭೇದಿಸಿ ಜನರ ಮುಂದಿಟ್ಟಿರುವುದು, ಒಕ್ಕೆತ್ತೂರು ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣದ ಹೀಗೆ ಒಂದರ ಹಿಂದೆ ಒಂದೊಂದಾಗಿ ಸಂಭವಿಸಿದ ಸರಣಿ ಪ್ರಕರಣಗಳ ಅಪರಾಧಿಗಳನ್ನು ಕೂಡಲೇ ಪತ್ತೆ  ಹಚ್ಚಿರುವುದನ್ನು ಹೆಸರಿಸಬಹುದಾಗಿದ್ದು,  ವಿಟ್ಲ ಪರಿಸರದಲ್ಲಿ ಇಷ್ಟೊಂದು ಘಟನೆಗಳು ಸಾಕಷ್ಟು ಸಂಭವಿಸಿದ್ದು ತಿಂಗಳುಗಟ್ಟಲೆ ನಂತರವೂ ಎಲ್ಲಾ ನೈಜ ಅಪರಾಧಿಗಳ ಪತ್ತೆಯಾಗದೆ ಉಳಿದಿರುವ ಉದಾಹರಣೆಗಳಿವೆ ಎಂಬುವುದಾಗಿ  ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ವಿಟ್ಲ ವಲಯದ ಅಧ್ಯಕ್ಷರಾದ ಎಮ್. ಎ. ರಹಿಮಾನ್  ಪ್ರಕಟಣೆಯಲ್ಲಿ ತಿಳಿಸಿದರು.

ಪಕ್ಷದ ವತಿಯಿಂದ ನಿಷ್ಠೆ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನೊಳಗೊಂಡಂತೆ, ಉತ್ತಮ ಸಾಧನೆಗೈದ ಸರಕಾರಿ ಅಧಿಕಾರಿಗಳನ್ನು ಗುರುತಿಸಿ ಅಭಿನಂದಿಸುವ, ಸನ್ಮಾನಿಸುವ ಮೂಲಕ ಭ್ರಷ್ಟರಹಿತ ಅಧಿಕಾರಿಗಳಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆಂದು ಅವರು ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News