ದ.ಕ. ಜಿಲ್ಲೆಯಲ್ಲಿ 1,006 ಮಂದಿಗೆ ಕೋವಿಡ್ ಲಸಿಕೆ

Update: 2021-01-18 17:25 GMT

ಮಂಗಳೂರು, ಜ.18: ದ.ಕ.ಜಿಲ್ಲೆಯಲ್ಲಿ ಮೊದಲ ಹಂತದ ಲಸಿಕೆ ನೀಡುವ ಅಭಿಯಾನ ಯಶಸ್ವಿಯಾಗುತ್ತಿದ್ದು, ಸೋಮವಾರ 1,006 ಮಂದಿಗೆ ಲಸಿಕೆ ನೀಡಲಾಗಿದೆ. ಆ ಮೂಲಕ ಶೇ.45 ಸಾಧನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2,240 ಮಂದಿಗೆ ಲಸಿಕೆ ನೀಡುವ ಗುರಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಹೊಂದಿದೆ.

ಸೋಮವಾರ 24 ಕಡೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆದಿದೆ. ಆ ಪೈಕಿ ಮುಲ್ಕಿ 20, ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ 46, ಲೇಡಿಗೋಷನ್ ಆಸ್ಪತ್ರೆ 69, ಬಂಟ್ವಾಳ ತಾಲೂಕು ಆಸ್ಪತ್ರೆ 27, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ 186, ಮೂಡಬಿದಿರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 52, ಸುಳ್ಯ 77, ವಿಟ್ಲ 51, ವಾಮದ ಪದವು ಆರೋಗ್ಯ ಕೇಂದ್ರದಲ್ಲಿ 29, ಕೆಎಂಸಿ 66, ಬೆಳ್ತಂಗಡಿ ತಾಲೂಕು ಆಸ್ಪತ್ರೆ 7, ತುಂಬೆ 40, ವೆನ್ಲಾಕ್ 84, ಉಪ್ಪಿನಂಗಡಿ 26, ಕಡಬ 34, ಪುತ್ತೂರು ಸಿಟಿ ಆಸ್ಪತ್ರೆ 64, ಪುತ್ತೂರು ಸರಕಾರಿ ಆಸ್ಪತ್ರೆ 30, ಕಣಚೂರು ಆಸ್ಪತ್ರೆ 73 ಸಹಿತ 1006 ಮಂದಿಗೆ ಲಸಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News