​ಅಂಜುಮನ್ ಸಂಸ್ಥೆಯಲ್ಲಿ ಸಂಶೋಧನೆ, ಉದ್ಯಮ ಕೇಂದ್ರ ಉದ್ಘಾಟನೆ

Update: 2021-01-18 17:32 GMT

ಭಟ್ಕಳ : ಅಂಜುಮನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜಮೆಂಟ್ ಕಾಲೇಜಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಶೋಧನೆ ಹಾಗೂ ಉದ್ಯಮ ಕೇಂದ್ರವನ್ನು ಕಾಲೇಜ್ ಬೋರ್ಡ್ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಉದ್ಘಾಟಿಸಿದರು.

ಆನ್ಲೈನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಣಿಪಾಲದ ಡಾ.ಅರುಣ್ ಶ್ಯಾನಭಾಗ ಮಾತನಾಡಿ, ಸರಕಾರದಿಂದಲೇ ಎಲ್ಲರಿಗೂ ಉದ್ಯೋಗ ನೀಡುವುದು ಅಸಾಧ್ಯವಾದ ಸಂಗತಿಯಾಗಿದೆ. ಸಂಶೋಧನಾ ಮಾರ್ಗದಲ್ಲಿ ಹೊಸ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ ಎಂದರು.

ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಡಾಕ್ ಉಪನಿರ್ದೇಶಕ ಶಿವಾನಂದ ಎಲ್ಲಿಗಾರ್, ಡಾ.ವೀರಣ್ಣ ಎಸ್. ಹವಾಲ್ದಾರ ಧಾರವಾಡ, ಪ್ರೊ. ಸೂರ್ಯ ನಾರಾಯಣ ರಾವ್ ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಾದ ಕಿರಣ ವಿಠ್ಠಲ್, ವಿಶ್ವನಾಥ, ನೂತನ ಕೇಂದ್ರದ ಉದ್ದೇಶವನ್ನು ವಿವರಿಸಿದರು.  ಪ್ರಾಚಾರ್ಯ ಮುಸ್ತಕ್ ಆಹ್ಮದ್ ಬಾವಿಕಟ್ಟೆ ಸ್ವಾಗತಿಸಿದರು. ಆನಂದ ಮೂರ್ತಿ ಶಾಸ್ತ್ರೀ ವಂದಿಸಿದರು. ಶ್ರೀಶೈಲ್ ಭಟ್ ಹಾಗೂ ಉಮ್ಮೇ ಫರ್ವಾ ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News