ಸುಡಾನ್ ನ ದಾರ್ಫರ್‌ನಲ್ಲಿ ಹಿಂಸಾಚಾರ: 80ಕ್ಕೂ ಅಧಿಕ ಮಂದಿ ಸಾವು

Update: 2021-01-18 18:16 GMT

ಖಾರ್ತೂಮ್ (ಸುಡಾನ್), ಜ. 18: ಸುಡಾನ್ ದೇಶದ ಗಲಭೆಗ್ರಸ್ತ ದಾರ್ಫರ್ ವಲಯದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ರವಿವಾರ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯು ತನ್ನ ಕಾರ್ಯಾಚರಣೆ ಕೊನೆಗೊಳಿಸಿದ ಬಳಿಕ ಕೇವಲ ಎರಡು ವಾರಗಳಲ್ಲಿ ವಲಯದಲ್ಲಿ ಹಿಂಸೆ ಸ್ಫೋಟಿಸಿದೆ.

ದೇಶದ ಪಶ್ಚಿಮ ಭಾಗದಲ್ಲಿ ವರ್ಷಗಳಿಂದ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸುವ ಉದ್ದೇಶದಿಂದ ಅಕ್ಟೋಬರ್‌ನಲ್ಲಿ ಶಾಂತಿ ಒಪ್ಪಂದವೊಂದು ಏರ್ಪಟ್ಟಿತ್ತು.

ಪಶ್ಚಿಮ ದಾರ್ಫರ್ ರಾಜ್ಯದ ರಾಜಧಾನಿ ಎಲ್ ಗೆನೈನದಲ್ಲಿ ಅರಬ್ ಮತ್ತು ಅರಬೇತರ ಬುಡಕಟ್ಟುಗಳ ಜನರ ಮಧ್ಯೆ ಸಂಘರ್ಷ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News