ಬೈಡನ್ ಪ್ರಮಾಣ: ಎಲ್ಲ ಭದ್ರತಾ ಸಿಬ್ಬಂದಿಯ ತಪಾಸಣೆ

Update: 2021-01-18 18:21 GMT

ವಾಶಿಂಗ್ಟನ್, ಜ. 18: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ಪ್ರಮಾಣವಚನ ಕಾರ್ಯಕ್ರಮದ ವೇಳೆ ನಿಯೋಜಿಸಲ್ಪಡುವ ಎಲ್ಲ 25,000 ನ್ಯಾಶನಲ್ ಗಾರ್ಡ್ಸ್ ಯೋಧರನ್ನು ಕಾನೂನು ಅನುಷ್ಠಾನ ಸಂಸ್ಥೆಗಳು ತಪಾಸಣೆಗೆ ಒಳಪಡಿಸಲಿವೆ.

ಜನವರಿ 6ರಂದು ಅಮೆರಿಕ ಸಂಸತ್‌ನಲ್ಲಿ ನಡೆದ ಭೀಕರ ಹಿಂಸಾಚಾರದಲ್ಲಿ ಭಾಗವಹಿಸಿದ ಕೆಲವವರು ಭದ್ರತಾ ಸಂಸ್ಥೆಗಳೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದು ಬಹಿರಂಗಗೊಂಡ ಬಳಿಕ ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ.

‘‘ಸೀಕ್ರೆಟ್ ಸರ್ವಿಸ್ ಮತ್ತು ಎಫ್‌ಬಿಐ ಜೊತೆಗೆ ಸಮನ್ವಯ ಸಾಧಿಸುತ್ತಾ, ಭದ್ರತಾ ಕಾರ್ಯಕ್ಕೆ ನಿಯೋಜಿಸಲ್ಪಡುವ ಎಲ್ಲ ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗುವುದು’’ ಎಂದು ನ್ಯಾಶನಲ್ ಗಾರ್ಡ್ಸ್ ಬ್ಯೂರೋ ಮುಖ್ಯಸ್ಥ ಜನರಲ್ ಡೇನಿಯಲ್ ಹೊಕಾನ್ಸನ್ ರವಿವಾರ ಸಿಬಿಎಸ್ ನ್ಯೂಸ್‌ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News