ಉಳ್ಳಾಲ ದರ್ಗಾಕ್ಕೆ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಭೇಟಿ

Update: 2021-01-19 10:44 GMT

ಉಳ್ಳಾಲ:  ಮಂಗಳೂರಿನ ಜನರು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವವರು, ಶಿಕ್ಷಿತರು ಆಗಿದ್ದಾರೆ. ಜನರು  ಧರ್ಮ ಅರ್ಥ ಮಾಡಿಕೊಂಡರೆ ದಾರಿ ತಪ್ಪಿ ಹೋಗುವುದಿಲ್ಲ,. ಆದರೆ ಉಳ್ಳಾಲ ಧಾರ್ಮಿಕ ಕ್ಷೇತ್ರ ದ ಕೇಂದ್ರ ವಾಗಿದ್ದು, ಇದರ ಅಭಿವೃದ್ಧಿಗೆ ಸರ್ಕಾರ ದ ಶ್ರಮ ಇದೆ ಎಂದು ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ  ಹೇಳಿದರು.

ಅವರು ಉಳ್ಳಾಲ ದರ್ಗಾ ಭೇಟಿ ನೀಡಿ ಝಿಯಾರತ್ ನಡೆಸಿದ ಬಳಿಕ ಮಾತನಾಡಿದರು.

ನಾವು  ಶಾಂತಿ ಸಹಬಾಳ್ವೆ ಯಿಂದ ಕೆಲಸ ಮಾಡಬೇಕು. ಇದಕ್ಕೆ ಪೂರಕವಾಗಿ ಉಳ್ಳಾಲ ದರ್ಗಾ ಇದೆ. ಧರ್ಮ ಜಾತಿ ಆಧಾರಿತ ವಿಂಗಡನೆ ದರ್ಗಾದಲ್ಲಿ ಆಗುವುದಿಲ್ಲ. ಉಳ್ಳಾಲದಲ್ಲಿ ಶಾಂತಿ ನೆಲೆಸಿದರೆ ದಕ.ಜಿಲ್ಲಾದ್ಯಂತ ಶಾಂತಿ ನೆಲೆಸುತ್ತದೆ ಎಂದರು.

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಫಾರೂಕ್ ಉಳ್ಳಾಲ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ದರ್ಗಾ ಉಪಾಧ್ಯಕ್ಷ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಯು.ಕೆ ಇಬ್ರಾಹೀಮ್, ಜತೆ ಕಾರ್ಯದರ್ಶಿ ಎ.ಕೆ ಮೊಹಿಯದ್ದೀನ್ ಹಾಜಿ,  ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕರ್ ಕೋಟೆಪುರ, ಎಮ್.ಎಚ್ ಇಬ್ರಾಹೀಂ ಹಳೆಕೋಟೆ, ಪ್ರ.ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್ ಹಾಜಿ ಪಿಲಾರು, ಸದಸ್ಯರಾದ  ಕುಂಞಿ ಅಹ್ಮದ್ ಅಳೇಕಲ, ಇಬ್ರಾಹೀಮ್ ಹಾಜಿ ಉಳ್ಳಾಲಬೈಲು, ಕಾಸಿಂ ಕೋಡಿ, ಹನೀಫ್ ಸೋಲಾರ್, ಕಾದರ್ ಮೊಯ್ಲಾರ್, ಅಲಿಮೋನು, ಹಸನ್ ಕೈಕೊ, ನಝೀರ್ ಸುಂದರಿಬಾಗ್, ಹಸೈನಾರ್ ಬೊಟ್ಟು, ಕೆ.ಎನ್ ಮಹ್ಮೂದ್, ಜಮಾಲ್ ಮೇಲಂಗಡಿ, ಹಮ್ಮಬ್ಬ ಕೋಟೇಪುರ, ಕುಂಞಿಮೋನು ಕೋಟೇಪುರ, ಖಲೀಲ್ ಕಿಲಿರಿಯ, , ಮೊಯಿದಿನಬ್ಬ ಉಳ್ಳಾಲ ಬೈಲ್, ಹಾಗೂ ಅಸ್ಗರ್ ಮುಡಿಪು, ಅರಿಯಪ್ಪ, ಆಶಾ, ಹೇಮಂತ್ ಮತ್ತಿತ್ತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News