ಕಾಳಾವರ ಷಷ್ಠಿ ಉತ್ಸವದಲ್ಲಿ ಎಂಟು ಬಾಲ ಭಿಕ್ಷುಕರ ರಕ್ಷಣೆ

Update: 2021-01-19 14:48 GMT

ಉಡುಪಿ, ಜ.19 : ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕಾಳಾವರ ಮಹಾಲಿಂಗೇಶ್ವರ ದೇವಸ್ಥಾನದ ಷಷ್ಠಿ ಉತ್ಸವದಲ್ಲಿ ಭಿಕ್ಷಾಟನೆ ನಿರತ ಎಂಟು ಮಕ್ಕಳನ್ನು ರಕ್ಷಿಸಿ, ಭಿಕ್ಷಾಟನೆ ಮಾಡದಂತೆ ಪೋಷಕರಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಯಿತು.

ಜಾತ್ರೆಯಲ್ಲಿ ಸಾರ್ವಜನಿಕರಿಗೆ ಭಿಕ್ಷಾಟನೆ, ಬಾಲ್ಯವಿವಾಹ ಪದ್ಧತಿ, ಬಾಲ ಕಾರ್ಮಿಕ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಕಾರ್ಯಕ್ರು ನೀಡಲಾಯಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಪಿಲ, ಸಮಾಜ ಕಾರ್ಯ ಕರ್ತರಾದ ಯೋಗೀಶ್, ಸುರಕ್ಷಾ, ಔಟ್ರೀಚ್ ವರ್ಕರ್ ಸುನಂದಾ ಮತ್ತು ಸಂದೇಶ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News