ತ್ರಿಭಾಷಾ ಕವನ ಸಂಕಲನ ‘ಕವಿತಾ ಕಿರಣ’ ಬಿಡುಗಡೆ

Update: 2021-01-19 14:50 GMT

ಹೆಬ್ರಿ, ಜ.19: ಕಡ್ತಲ ಸಿರಿಬೈಲಿನಲ್ಲಿ ಜ.24ರಂದು ನಡೆಯುವ ಮೂರನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಮೌರೀಸ್ ತಾವ್ರೋ ಅವರ ತುಳು-ಕನ್ನಡ- ಕೊಂಕಣಿ ತ್ರಿಭಾಷಾ ಕವನ ಸಂಕಲನ ‘ಕವಿತಾ ಕಿರಣ’ವನ್ನು ಧರ್ಮಗುರು ಫಾ.ಸುನೀಲ್ ಡಿಸಿಲ್ವಾ ಅಜೆಕಾರು ಚರ್ಚ್‌ನಲ್ಲಿ ಬಿಡುಗಡೆಗೊಳಿಸಿದರು.

ಕೆಥೋಲಿಕ್ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕ, ಧರ್ಮಗುರು ಫಾ. ವಿನ್ಸೆಂಟ್ ಕ್ರಾಸ್ಟಾ, ದ.ಕ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನಿವೃತ್ತದ ಅಧಿಕಾರಿ ಕರುಣಾಚಂದ್ರ ಪಿ. ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಕಾಶನದ ಮುಖ್ಯಸ್ಥ ಶೇಖರ ಅಜೆಕಾರು ವಹಿಸಿದ್ದರು.

ಪ್ರಕಾಶ್ ಡಿಸೋಜಾ, ಅಲೆಕ್ಸ್ ಡಿಸೋಜಾ ಉಪಸ್ಥಿತರಿದ್ದರು. ಚರ್ಚ್‌ನ ಪಾಲನಾ ಮಂಡಳಿ ಉಪಾಧ್ಯಕ್ಷ, ಗ್ರಾಪಂ ಸದಸ್ಯ ಜಾನ್ ಟೆಲಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಲೀನಾ ಮಸ್ಕರೇನಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News