ಕೊಕ್ಕರ್ಣೆ: ಆರೋಗ್ಯ ಜಾಗೃತಿ ಬೀದಿನಾಟಕಕ್ಕೆ ಚಾಲನೆ

Update: 2021-01-19 14:52 GMT

ಉಡುಪಿ, ಜ.19: ಉಡುಪಿ ಜಿಪಂ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಕಲಾವಿದರಿಂದ ಉಡುಪಿ ತಾಲೂಕಿನಾದ್ಯಂತ ಆರೋಗ್ಯ ಜಾಗೃತಿ ಬೀದಿನಾಟಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಕೊಕ್ಕರ್ಣೆಯ ನೆಂಚಾರಿನಲ್ಲಿ ಈ ಅಭಿಯಾನಕ್ಕೆ ಇಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೆೈ ಚಾಲನೆ ನೀಡಿದರು. ಈ ಬೀದಿ ನಾಟಕದ ಮೂಲಕ ಕೊರೋನಾ, ಕ್ಷಯರೋಗ, ತಾಯಿ ಮತ್ತು ಮಗುವಿನ ಆರೈಕೆ ಇನ್ನಿತರ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೀಡಿ, ಬೀದಿನಾಟಕದ ಮೂಲಕ ಜನ ಜಾಗೃತಿ ವುೂಡಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯ ಬಾಯಿ, ತಾಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಕ್ಕರ್ಣೆಯ ಸಿಬ್ಬಂದಿ ಪರಮೇಶ್ವರ್ ನಾಯಕ್, ಗುಲಾಬಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ, ಬೀದಿನಾಟಕದ ನಿರ್ದೇಶಕ ವಿವೇಕಾನಂದ ಎನ್., ಸಂಚಾಲಕ ರವಿರಾಜ್ ಎಚ್.ಪಿ. ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News