ಮನಪಾ ಬಜೆಟ್: ನಾಗರಿಕ ಸಲಹಾ ಅಭಿಯಾನಕ್ಕೆ ಚಾಲನೆ

Update: 2021-01-19 17:10 GMT

ಮಂಗಳೂರು, ಜ.19: ಜನಾಗ್ರಹ ಸಂಸ್ಥೆಯ ‘ಮೈ ಸಿಟಿ ಮೈ ಬಜೆಟ್’ ಅಭಿಯಾನದ ಮೂಲಕ 2021ರ ಮಂಗಳೂರು ಮಹಾನಗರ ಪಾಲಿಕೆ ಬಜೆಟಿನ ಬಗ್ಗೆ ನಾಗರಿಕರ ಸಲಹೆಗಳನ್ನು ಸ್ವಿಕರಿಸುವ ಅಭಿಯಾನಕ್ಕೆ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಂಗಳವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನಾಗರಿಕರು 2021ನೇ ಸಾಲಿನ ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ತಮಗೆ ಅವಶ್ಯವಿರುವ ಸಲಹೆಗಳನ್ನು ಹೊಂದಿದ್ದರೆ, ಅವುಗಳನ್ನು ಪಾಲಿಕೆಯ ಮುಂದಿಡಲಾಗುವುದು ಎಂದರು.

ನಾಗರಿಕರು ಅನಿಸಿಕೆ, ಸಲಹೆಗಳನ್ನು ಜ.22ರ ಮಧ್ಯಾಹ್ನದೊಳಗೆ ಬಜೆಟ್ ಕುರಿತು ಸಲಹೆ, ಸೂಚನೆಗಳನ್ನು ತಿಳಿಸಬಹುದಾಗಿದೆ. ನಾಗರಿಕರು ತಮ್ಮ ಅಭಿಪ್ರಾಯದಲ್ಲಿ ಯಾವ ಕಾರ್ಯಗಳಿಗೆ ಹೆಚ್ಚಿನ ಬಜೆಟ್ ವಿನಿಯೋಗಿಸಬೇಕು ಎಂದು ಮೂರು ಮುಖ್ಯ ಆಯ್ಕೆಗಳ ಮೂಲಕ ರಸ್ತೆ, ಪಾದಚಾರಿ ಮಾರ್ಗಗಳು, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸರಬರಾಜು, ಘನ ತ್ಯಾಜ್ಯ ನಿರ್ವಹಣೆ, ಇತ್ಯಾದಿ ಬಗ್ಗೆ ತಿಳಿಸಬಹುದು.

ನಾಗರಿಕರ ಸಹಭಾಗಿತ್ವವು ನಗರದ ಬಜೆಟ್ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಇದರಿಂದ ನಗರ ಹಾಗು ನಾಗರಿಕರ ನಡುವೆ ಒಳ್ಳೆಯ ಸಂಬಂಧ ಮೂಡುತ್ತದೆ. ಅಂತೆಯೇ ವಾರ್ಡ್ ಸಮಿತಿಗಳ ಮೂಲಕ ಒಳ್ಳೆಯ ಯೋಜನೆಗಳ ನಿರೂಪಣೆಯಾಗಲಿದೆ ಎಂದು ಜನಾಗ್ರಹದಲ್ಲಿ ನಾಗರಿಕರ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಸಪ್ನಾ ಕರೀಂ ಮತ್ತು ಶ್ರೀನಿವಾಸ ಅಳವಳ್ಳಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News