ಕಾಸರಗೋಡು : ಕೇಂದ್ರ ಸರಕಾರದ ವಿರುದ್ಧ ಸಿಐಟಿಯು ನೇತೃತ್ವದಲ್ಲಿ ವಾಹನ ಜಾಥಾ

Update: 2021-01-19 18:15 GMT

ಕಾಸರಗೋಡು  :  ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳನ್ನು  ಪ್ರತಿಭಟಿಸಿ ಸಿಐಟಿಯು ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಮಿಕ ಸಂಗಮದ ಪೂರ್ವಭಾವಿಯಾಗಿ ನಡೆದ ವಾಹನ ಪ್ರಚಾರ ಜಾಥಾವನ್ನು ಮಂಜೇಶ್ವರ  ಸಮೀಪದ  ಮಜೀರ್ ಪಳ್ಳದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ  ಸಿ ಐ ಟಿ  ಯು ಕರ್ನಾಟಕ ರಾಜ್ಯ ಯಮುನಾ ಗಾಂವ್ಕರ್ ಉದ್ಘಾಟಿಸಿದರು.

ಉತ್ತರ ವಲಯ ಜಾಥಾ ನಾಯಕ   ಸಿ ಐ ಟಿ  ಯು ಜಿಲ್ಲಾಧ್ಯಕ್ಷ ವಿ .  ಪಿ .ಪಿ    ಮುಸ್ತಫಾ ಮತ್ತು ದಕ್ಷಿಣ ವಲಯ ಜಾಥದ  ನಾಯಕ ರಾಗಿರುವ   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೆ  ರಾಜನ್  ಅವರಿಗೆ ಪತಾಕೆ   ಹಸ್ತಾ೦ತರಿಸುವ  ಮೂಲಕ ಚಾಲನೆ ನೀಡಿದರು.

ಕಾರ್ಮಿಕ ವಿರೋಧಿ ಕಾಯ್ದೆಗಳನ್ನುನು ಹಿಂಪಡೆಯಬೇಕು, ಕೃಷಿ ತಿದ್ದುಪಡಿ  ಮಸೂದೆಯನ್ನು ರದ್ದುಗೊಳಿಸಬೇಕು, ವಿದ್ಯುತ್ ತಿದ್ದುಪಡಿ  ಕಾಯ್ದೆ ನ್ನು ರದ್ದುಗೊಳಿಸಬೇಕು, ಖಾಸಗೀಕರಣವನ್ನು ಕೊನೆಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು  ಜಾಥಾ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ವಿ.ಪಿ.ಪಿ ಮುಸ್ತಫಾ ಮಾತನಾಡಿದರು. ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೆ ರಾಜನ್, ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಆಳ್ವ, ಮಾಜಿ ಶಾಸಕ ಕೆ.ವಿ ಕುಂಞರಾಮನ್, ಡಿ.ಬೂಬ, ಡಿ.ಕಮಲಾಕ್ಷ, ಸಿ.ಪಿ.ಎಂ ಜಿಲ್ಲಾ ಸಮಿತಿ ಸದಸ್ಯ ಕೆ.ಆರ್ ಜಯಾನಂದ, ವಿಶ್ವನಾಥ ಕುದೂರು, ವರ್ಕಾಡಿ ಗ್ರಾ.ಪಂ ಅಧ್ಯಕ್ಷೆ ಭಾರತಿ.ಎಸ್, ಗೀತಾ ಸಾಮಾನಿ, ನವೀನ್, ಪ್ರಶಾಂತ್ ಕನಿಲ ಮೊದಲಾದವರು ಇದ್ದರು. ಪ್ರಚಾರ ಜಾಥಾ ಜ.21 ರ ತನಕ ನಡೆಯಲಿದ್ದು, 28 ರಂದು ಕಾರ್ಮಿಕ ಸಂಗಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News