ಡ್ರ್ಯಾಗನ್ ಫ್ರೂಟ್ ಗೆ 'ಕಮಲಂ' ಎಂದು ಮರು ನಾಮಕರಣ ಮಾಡಿದ ಗುಜರಾತ್ ಸಿಎಂ

Update: 2021-01-21 09:09 GMT

ಗುಜರಾತ್,ಜ.20: 'ಡ್ರ್ಯಾಗನ್ ಫ್ರೂಟ್ ಎಂಬ ಹೆಸರು ಚೀನಾದೊಂದಿಗೆ ಬೆಸೆದುಕೊಂಡಿದೆ' ಎಂಬ ಕಾರಣ ಮುಂದಿಟ್ಟು ಕೊಂಡು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಡ್ರ್ಯಾಗನ್ ಫ್ರೂಟ್ ಎಂಬ ಹೆಸರಿನ ಬದಲು 'ಕಮಲಂ' ಎಂಉ ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

"ಡ್ರ್ಯಾಗನ್ ಫ್ರೂಟ್ ಎಂಬ ಹೆಸರು ಚೀನಾದೊಂದಿಗೆ ಬೆಸೆದಿರುವ ಕಾರಣ ರಾಜ್ಯ ಸರಕಾರವು ಮರುನಾಮಕರಣ ಮಾಡುವ ನಿರ್ಧಾರಕ್ಕೆ ಬಂದಿದೆ. ಈ ಹೆಸರಿನಲ್ಲಿ ಯಾವುದೇ ರಾಜಕೀಯ ದುರುದ್ದೇಶಗಳಿಲ್ಲ. ಹಣ್ಣಿನ ಮೇಲ್ಮೈಯು ಕಮಲವನ್ನು ಹೋಲುವ ಕಾರಣದಿಂದಾಗಿ ಈ ಹೆಸರನ್ನು ಇಡಲಾಗಿದೆ" ಎಂದು ವಿಜಯ್‌ ರೂಪಾನಿ ಸಮರ್ಥಿಸಿಕೊಂಡಿದ್ದಾರೆ.

ಕಮಲಂ ಅನ್ನುವುದು ತಾವರೆಗಿರುವ ಸಂಸ್ಕೃತ ಪದವಾಗಿದೆ. ಆಡಳಿತ ಪಕ್ಷ ಬಿಜೆಪಿಯ ಚಿಹ್ನೆಯೂ ಹೌದು. ಅಲ್ಲದೇ, ಗುಜರಾತ್‌ ಬಿಜೆಪಿಯ ಮುಖ್ಯ ಕಚೇರಿಯ ಹೆಸರು ಕಮಲಂ ಎಂದಾಗಿದೆ.

ಈ ನಡುವೆ ಗುಜರಾತ್‌ ಮುಖ್ಯಮಂತ್ರಿಯ ಈ ನಿರ್ಧಾರವು ಸಾಮಾಜಿಕ ತಾಣದಾದ್ಯಂತ ನಗೆಪಾಟಲಿಗೀಡಾಗಿದೆ. ಡ್ರ್ಯಾಗನ್ ಫ್ರೂಟ್ ನ ಮೇಲ್ಮೈ ನೋಡಿ ನೀವು ಕಮಲಂ ಎಂದು ಹೆಸರಿಡಬಹುದಾದರೆ ಬಾಳೆ ಹಣ್ಣಿಗೆ (ಬನಾನಾ) ಏನು ಹೆಸರಿಡುತ್ತೀರಿ? ಎಂದು ನೆಟ್ಟಿಗರು ಕುಹಕವಾಡಿದ್ದಾರೆ. ಸದ್ಯ ಡ್ರ್ಯಾಗನ್ ಫ್ರೂಟ್ ಬದಲು ಟ್ವಿಟರ್‌ ನಲ್ಲಿ ಬನಾನಾ ಟ್ರೆಂಡ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News