×
Ad

ಕುಂದಾಪುರದಲ್ಲಿ ಕರಕುಶಲ ಉತ್ಪಾದನಾ ಘಟಕ ಸ್ಥಾಪನೆ : ರಾಘವೇಂದ್ರ ಶೆಟ್ಟಿ

Update: 2021-01-20 19:42 IST

ಕೋಟ, ಜ.20: ಕುಂದಾಪುರ ತಾಲೂಕಿನಲ್ಲಿ ಕರಕುಶಲ ವಸ್ತುಗಳ ಉತ್ಪಾದನಾ ಘಟಕ ಮಾಡಲು ಯೋಜನೆ ರೂಪಿಸಿದ್ದು, ಇನ್ನು ಮೂರು ತಿಂಗಳಲ್ಲಿ ಉತ್ಪಾದನಾ ಘಟಕ ಕಾರ್ಯಾರಂಭಗೊಳ್ಳಲಿದೆ ಎಂದು ಕರ್ನಾಟಕ ಕರಕುಶಲ ನಿಗಮದ ನೂತನ ಅಧ್ಯಕ್ಷ ಡಾ.ಬೇಳೂರು ರಾಘ ವೇಂದ್ರ ಶೆಟ್ಟಿ ಹೇಳಿದ್ದಾರೆ.

ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳಕ್ಕೆ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.

ಉಡುಪಿಯಲ್ಲಿ ಬೃಹತ್ ಶೋರೂಮ್ ಹಾಗೂ ಕರಕುಶಲ ಮೇಳವೊಂದನ್ನು ಆಯೋಜಿಸುವುದಾಗಿಯೂ ಡಾ.ರಾಘವೇಂದ್ರ ಶೆಟ್ಟಿ ಮಾಹಿತಿ ನೀಡಿದರು. ತಾಲೂಕು ಹಾಗೂ ಪಂಚಾಯತ್ ಮಟ್ಟದಲ್ಲಿ ಕರಕುಶಲ ಕರ್ಮಿಗಳ ಅಂಕಿ ಅಂಶ ಸಂಗ್ರಹದ ಬಗ್ಗೆ ಸರ್ವೆ ನಡೆಯುತಿದ್ದು ಕೆಲವೇ ದಿನಗಳಲ್ಲಿ ವರದಿ ಕೈ ಸೇರಲಿದೆ ಎಂದರು.

ಉಡುಪಿಯಲ್ಲಿ ಬೃಹತ್ ಶೋರೂಮ್ ಹಾಗೂ ಕರಕುಶಲ ಮೇಳವೊಂದನ್ನು ಆಯೋಜಿಸುವುದಾಗಿಯೂ ಡಾ.ರಾಘವೇಂದ್ರ ಶೆಟ್ಟಿ ಮಾಹಿತಿ ನೀಡಿದರು. ತಾಲೂಕು ಹಾಗೂ ಪಂಚಾಯತ್ ಮಟ್ಟದಲ್ಲಿ ಕರಕುಶಲ ಕರ್ಮಿಗಳ ಅಂಕಿ ಅಂಶ ಸಂಗ್ರಹದ ಬಗ್ಗೆ ಸರ್ವೆ ನಡೆಯುತಿದ್ದು ಕೆಲವೇ ದಿನಗಳಲ್ಲಿ ವರದಿ ಕೈ ಸೇರಲಿದೆ ಎಂದರು. ಕರಕುಶಲ ಅಭಿವೃದ್ಧಿ ನಿಗಮವು ರಾಜ್ಯದ ಕರಕುಶಲ ಕರ್ಮಿಗಳ ಸಮಗ್ರ ಅಭಿವೃದ್ಧಿಗೆ ಬದ್ದವಾಗಿದ್ದು, ಇದಕ್ಕಾಗಿ ಯೋಜನೆಗಳನ್ನು ರೂಪಿಸಲಾಗುುದು ಎಂದು ಡಾ. ಶೆಟ್ಟಿ ನುಡಿದರು.

ಕರಕುಶಲ ಅಭಿವೃದ್ಧಿ ನಿಗಮವು ರಾಜ್ಯದ ಕರಕುಶಲ ಕರ್ಮಿಗಳ ಸಮಗ್ರ ಅಭಿವೃದ್ಧಿಗೆ ಬದ್ದವಾಗಿದ್ದು, ಇದಕ್ಕಾಗಿ ಯೋಜನೆಗಳನ್ನು ರೂಪಿಸಲಾಗು ವುದು ಎಂದು ಡಾ. ಶೆಟ್ಟಿ ನುಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರು ಡಾ.ರಾಘ ವೇಂದ್ರ ಶೆಟ್ಟಿ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರ ಪೂಜಾರಿ ಕದ್ರಿಕಟ್ಟು, ಜಿ.ಸತೀಶ್ ಹೆಗ್ಡೆ, ಎಂ.ಸುಬ್ರಾಯ ಆಚಾರ್ಯ, ಕೋಟ ಗ್ರಾಪಂ ಮಾಜಿ ಸದಸ್ಯ ರವೀಂದ್ರ ಜೋಗಿ, ಪಂಚವರ್ಣ ಯುವಕ ಮಂಡಲದ ಸಲಹಾ ಸಮಿತಿ ಸದಸ್ಯ ಮನೋಹರ ಪೂಜಾರಿ, ವಿಶ್ವನಾಥ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News