ಜ.26ರಂದು ಉಡುಪಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ

Update: 2021-01-20 14:50 GMT
ವೈದೇಹಿ

ಉಡುಪಿ, ಜ. 20: ಕೊರೋನ ಲಾಕ್‌ಡೌನ್ ಕಾರಣದಿಂದ ಮುಂದೂಡ ಲಾಗಿದ್ದ ಉಡುಪಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.26 ರಂದು ಬ್ರಹ್ಮಾವರ ತಾಲೂಕು ಐರೋಡಿ ಗ್ರಾಮದ ಹಂಗಾರಕಟ್ಟೆ ಚೇತನಾ ಪ್ರೌಢ ಶಾಲೆಯ ಸರಸ್ವತಿ ಬಾಯಿ ರಾಜವಾಡೆ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಹತ್ತು ತಿಂಗಳ ಬಳಿಕ ನಿಗದಿತ ಜಿಲ್ಲಾ ಸಾಹಿತ್ಯ ಸಮ್ಮೇಳನ ವನ್ನು ಜಿಲ್ಲಾಡಳಿತ ಅನುಮತಿ ಪಡೆದು, ಕೋವಿಡ್-19ರ ಎಲ್ಲಾ ಮಾರ್ಗಸೂಚಿಗ ಳನ್ನು ಅಳವಡಿಸಿಕೊಂಡು ನಡೆಸಲಾಗುತ್ತಿದೆ ಎಂದರು.

ಕನ್ನಡ ಖ್ಯಾತ ಸಾಹಿತಿ, ಲೇಖಕಿ ವೈದೇಹಿ ಅವರು ಸಮ್ಮೇಳನಾಧ್ಯಕ್ಷೆಯಾಗಿರುವರು. ಸಮ್ಮೇಳನವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. ಜ.26ರ ಬೆಳಗ್ಗೆ 8:30ಕ್ಕೆ ಧ್ವಜಾರೋಹಣ ನಡೆಯಲಿದ್ದು, 9:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲೆಯ ಇಬ್ಬರು ಹಿರಿಯ ಮಹಿಳಾ ಸಾಧಕಿ ಯರಾದ ಜಾನಕಿ ಹಂದೆ ಹಾಗೂ ಜ್ಯೋತಿ ಕುಲಾಲ್ ಆವರ್ಸೆ ದೀಪ ಪ್ರಜ್ವಲನ ಗೊಳಿಸಲಿದ್ದಾರೆ ಎಂದರು.

ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಆಹ್ವಾನಿತಗಣ್ಯರು, ಜನಪ್ರತಿನಿಧಿ ಗಳೊಂದಿಗೆ ನಿಕಟಪೂರ್ವ ಅಧ್ಯಕ್ಷ ಡಾ.ಬಿ.ಜನಾರ್ದನ ಭಟ್ ಅವರು ಉಪಸ್ಥಿತರಿರುವರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಖ್ಯಾತ ಲೇಖಕಿ ಆರ್.ಪೂರ್ಣಿಮಾ ಸಮಾರೋಪ ಭಾಷಣ ಮಾಡಲಿದ್ದಾರೆ. ಆಸ್ಟ್ರೋ ಮೋಹನ್, ರವಿ ಬಸ್ರೂರು, ಕಲಾವತಿ ದಯಾನಂದ ಸೇರಿದಂತೆ ವಿವಿಧ ಕ್ಷೇತ್ರಗಳ 17 ಮಂದಿ ಸಾದಕರು ಹಾಗೂ ಮೂರು ಸಂಸ್ಥೆ ಗಳನ್ನು ಸನ್ಮಾನಿಸ ಲಾಗುವುದು. ಕಾರ್ಯಕ್ರಮಗಳ ನಡುವೆ ಕನ್ನಡ ಗೀತಗಾಯನ ಹಾಗೂ ರವಿ ಕಾರಂತರಿಂದ ಏಕವ್ಯಕ್ತಿ ಸ್ವರಾಂಜಲಿ ನಡೆಯಲಿದೆ ಎಂದು ಅವರು ವಿವರಿಸಿದರು.

ಉದ್ಘಾಟನೆಯ ಬಳಿಕ 12ಗಂಟೆಗೆ ಅಂತಾರಾಷ್ಟ್ರೀಯ ಜಾದುಗಾರ, ಲೇಖಕ, ನಟ ಓಂ ಗಣೇಶ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ಮಾಣ ಯಾಕೂಬ್ ಖಾದರ್ ಗುಲ್ವಾಡಿ ಅವರಿಂದ ‘ನನ್ನ ಕಥೆ ನಿಮ್ಮ ಜೊತೆ’, ಅಪರಾಹ್ನ 1 ರಿಂದ ನಮ್ಮ ಉಡುಪಿ ಬಗ್ಗೆ ನಾಲ್ವರಿಂದ ಉಪನ್ಯಾಸ, 2ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು ನಡೆಯಲಿದೆ.

ಅಪರಾಹ್ನ 3:15ರಿಂದ 3:45ರವರೆಗೆ ಜಿಲ್ಲೆಯ ಹಿರಿಯ ಚೇತನ 93ರ ಹರೆಯದ ಕೋಟೇಶ್ವರ ಸುಬ್ಬಣ್ಣ ಶೆಟ್ಟಿ ಅವರೊಂದಿಗೆ ಎಎಸ್‌ಎನ್ ಹೆಬ್ಬಾರ್ ನಡೆಸುವ ಸಂವಾದ, 3:45ರಿಂದ ಬಹಿರಂಗ ಅಧಿವೇಶನ ನಡೆಯಲಿದೆ.

ಸಮಾನಾಂತರ ವೇದಿಕೆಯಲ್ಲಿ ಬೆಳಗ್ಗೆ 10 ಕ್ಕೆ ಕವಿಗೋಷ್ಠಿ, 11:30ರಿಂದ ಮರೆಯಲಾಗದ ಮಹನೀಯರು ಕುರಿತ ಕಾರ್ಯಕ್ರಮದಲ್ಲಿ ವಿದ್ವಾನ್ ಡಿ.ವಿ. ಹೊಳ್ಳರ ಕುರಿತು ಉಪೇಂದ್ರ ಸೋಮಯಾಜಿ, ಹಾಜಿ ಅಬ್ದುಲ್ ಸಾಹೇಬ್ ಕುರಿತು ಡಾ.ಪಿ.ವಿ.ಭಂಡಾರಿ, ರಂಗೋಲಿ ಕಲಾವಿದ ಬಿ.ಪಿ.ಬಾಯರಿ ಕುರಿತು ಡಾ.ಭಾರತಿ ಮರವಂತೆ ಪರಿಚಯಿಸಲಿದ್ದಾರೆ.

ಅಪರಾಹ್ನ 1 ಕ್ಕೆ ಯಕ್ಷಗಾನ ಸ್ಥಿತ್ಯಂತರ ಕುರಿತು ಪ್ರಸಾದ ಮೊಗಬೆಟ್ಟು, 2 ರಿಂದ ವೈದೇಹಿ ಬರಹದಲ್ಲಿ ಮಹಿಳಾ ಪ್ರಜ್ಞೆ ಕುರಿತು ಡಾ.ಜ್ಯೋತಿ ಚೆಳಾೃರು, ಮಹಿಳೆ ಮತ್ತು ಸಾಮಾಜಿಕ ಸವಾಲುಗಳು ಕುರಿತು ಡಾ.ರಶ್ಮಿ ಕುಂದಾಪುರ ಮಾತನಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಸಾಪದ ಪದಾಧಿಕಾರಿಗಳಾದ ಆರೂರು ತಿಮ್ಮಪ್ಪ ಶೆಟ್ಟಿ, ಸೂರಾಲು ನಾರಾಯಣ ಮಡಿ, ಭುವನಪ್ರಸಾದ ಹೆಗ್ಡೆ ಹಾಗೂ ಚೇತನಾ ಪ್ರೌಢ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಭರತ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News