2 ದನಗಳ ಕಳವು
Update: 2021-01-20 21:13 IST
ಅಜೆಕಾರು, ಜ.20: ರಬ್ಬರ್ ಟ್ಯಾಪಿಂಗ್ ಮಾಡಿಕೊಂಡಿದ್ದು, ಕೆರ್ವಾಶೆ ಗ್ರಾಮದ ಒಂಟೆಜಾರು ಬಾಪ್ರಬೈಲು ಎಂಬಲ್ಲಿ ವಾಸವಾಗಿದ್ದ ಲಿಜೋ ಮೋನ್ ಜಾರ್ಜ್ ಎಂಬವರು ತನ್ನ ಮನೆಯ ಎದುರು ಕಟ್ಟಿಹಾಕಿದ್ದ ಮೂರು ವರ್ಷ ಪ್ರಾಯದ ಎರಡು ದನಗಳನ್ನು ನಿನ್ನೆ ರಾತ್ರಿ 2ಗಂಟೆಯ ಬಳಿಕ ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಅಜೆಕಾರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳವಾದ ದನಗಳ ಮೌಲ್ಯ ಸುಮಾರು 30,000ರೂ. ಎಂದು ಅಂದಾಜಿಸಲಾಗಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.