ಪಜೀರು : ವಿದ್ಯುತ್ ಕಂಬಕ್ಕೆ ಗ್ಯಾಸ್ ಸಿಲಿಂಡರ್ ವಾಹನ ಢಿಕ್ಕಿ

Update: 2021-01-20 17:23 GMT

ಕೊಣಾಜೆ: ಪಜೀರು ಪಂಚಾಯಿತಿ ಬಳಿ  ವಿದ್ಯುತ್ ಕಂಬಕ್ಕೆ ಗ್ಯಾಸ್ ಸಿಲಿಂಡರ್ ತುಂಬಿದ್ದ ಪಿಕ್ ಅಪ್ ವಾಹನವೊಂದು  ಢಿಕ್ಕಿಯಾಗಿ ವಿದ್ಯುತ್ ಶಾರ್ಟ್  ಸರ್ಕ್ಯೂಟ್ ಆಗಿ  ಬೆಂಕಿ ಹತ್ತಿಕೊಂಡಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಘಟನೆಯ ಸಂದರ್ಭದಲ್ಲಿ ‌ಬೆಂಕಿ ಅವಘಡದಿಂದ ಕೂದಲೆಲೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.

ಪಜೀರು ಗ್ರಾಮ ಪಂಚಾಯತಿ ಕಚೇರಿಯ ಹಿಂಬದಿ ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು‌ ಗ್ರಾಹಕರಿಗೆ ವಿತರಿಸುತ್ತಿದ್ದ ಪಿಕ್ ಅಪ್ ವಾಹನವು ಹಿಂಬದಿ ತೆಗೆಯುವ ವೇಳೆ ಅಲ್ಲಿದ್ದ ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿ ಹೊಡೆದಿದೆ.

ಪಿಕಪ್ ಮೇಲೆ ಉರುಳಿದ ವಿದ್ಯುತ್ ಕಂಬ

ಢಿಕ್ಕಿಯ ಪರಿಣಾಮ ಕಂಬವು ತುಂಡಾಗಿ ಪಿಕ್ ಅಪ್ ವಾಹನದ ಮೇಲೆ ಉರುಳಿ ಬಿದ್ದಿದ್ದು ವಿದ್ಯುತ್ ಲೈನ್ ಸಿಲಿಂಡರ್ ಮೇಲೆ ಬಿದ್ದಿತ್ತು. ಅಷ್ಟರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಬೆಂಕಿ ಹತ್ತಿಕೊಳ್ಳುವುದರಿಂದ ತಪ್ಪಿದೆ. ಅವಘಡವನ್ನು ತಿಳಿಯದ ಮೆಸ್ಕಾಂ ಸಿಬ್ಬಂದಿ ಮತ್ತೆ ಪವರ್ ಆನ್ ಮಾಡಿದ್ದರ ಪರಿಣಾಮ ಬೆಂಕಿ ಹತ್ತಿದ್ದು ಸುತ್ತಮುತ್ತಲಿನ ಹುಲ್ಲುಗಾವಲಿಗೆ ಬೆಂಕಿ ಹತ್ತಿಕೊಂಡಿದೆ. ಮತ್ತೆ ವಿದ್ಯುತ್ ನಿಲುಗಡೆ ಆಗಿದ್ದು ಸ್ಥಳೀಯರು ಮೆಸ್ಕಾಂ‌ ಸಿಬ್ಬಂದಿಗೆ ಮಾಹಿತಿ ನೀಡಿ ನಂತರ ಬೆಂಕಿ ನಂದಿಸಿದ್ದಾರೆ.

ಪಿಕ್ ವಾಹನದ ಚಾಲಕ ಅಪಾಯ ಅರಿತು ಓಡಿದ್ದಾನೆ. ಅದೃಷ್ಟವಶಾತ್ ಪಿಕ್ ವಾಹನ ಮತ್ತು ಸಿಲಿಂಡರ್ ಗಳಿಗೆ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News