ಸಾರ್ವಜನಿಕ ಉದ್ಯಾನ ನಿರ್ಮಿಸಿ

Update: 2021-01-20 17:40 GMT

ಮಾನ್ಯರೇ,
 ನಂಜನಗೂಡಿನ ಹುಲ್ಲಹಳ್ಳಿ ನಾಲೆಗೆ ಹೊಂದಿಕೊಂಡಿದ್ದ ಪ್ರಸಿದ್ಧ ಸುಭಾಷ್ ಪಾರ್ಕ್ ಮಾಯವಾಗಿ ಸರಿಸುಮಾರು ಎರಡು ದಶಕಗಳೇ ಕಳೆದಿವೆ..! ಹಿರಿಯ ನಾಗರಿಕರು, ವಯೋವೃದ್ಧರು ಹಾಗೂ ವಾಯು ವಿಹಾರಕ್ಕೆ ಬರುವ ಜನಗಳಿಗೆ ಪಟ್ಟಣದ ಹೃದಯಭಾಗದಲ್ಲಿ ಇದ್ದ ಸುಭಾಷ್ ಪಾರ್ಕ್‌ನಿಂದಾಗಿ ಆರೋಗ್ಯ ಹಾಗೂ ವಿಶ್ರಾಂತಿ ದೃಷ್ಟಿಯಿಂದ ತುಂಬಾ ಅನುಕೂಲವಾಗಿತ್ತು..! ಸದ್ಯ, ಪಟ್ಟಣದಲ್ಲಿ ಸರಿಸುಮಾರು ಒಂದು ಲಕ್ಷ ಜನಸಂಖ್ಯೆ ಇದ್ದು ನಗರಸಭೆಯಾಗಿ ಭಡ್ತಿ ಪಡೆದು ಮೂರು ವರ್ಷಗಳು ಕಳೆದಿವೆ. ಆದರೆ ಪಟ್ಟಣದ ಸಮಸ್ತ ಜನತೆಯ ಅನುಕೂಲಕ್ಕಾಗಿ ಸಾರ್ವಜನಿಕ ಉದ್ಯಾನವನ ಇಲ್ಲದಿರುವುದು ಬೇಸರದ ಸಂಗತಿ..!
ನಂಜನಗೂಡು ಕ್ಷೇತ ಪ್ರತಿನಿಧಿಸುವ ಜನಪ್ರತಿನಿಧಿಗಳು ಕೇವಲ ಚುನಾವಣೆ ಸಮಯದಲ್ಲಿ ಊರಿಗೆ ಸಂಬಂಧಿಸಿದಂತೆ ದೊಡ್ಡ ದೊಡ್ಡ ಯೋಜನೆಯ ಪೊಳ್ಳು ಭರವಸೆಯನ್ನು ಘೋಷಣೆ ಮಾಡುತ್ತಾರೆ. ಆದರೆ ಈ ಭರವಸೆಗಳು ಕಾರ್ಯರೂಪಕ್ಕೆ ಬಂದಿದೆಯೇ ಅನ್ನುವುದನ್ನು ಪಟ್ಟಣದ ನಾಗರಿಕರು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.
ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ತಾಲೂಕಿನ ಆಡಳಿತ ಅಧಿಕಾರಿವೃಂದ ಜನಗಳ ಅಗತ್ಯಕ್ಕನುಗುಣವಾಗಿ ಸಾರ್ವಜನಿಕ ಉದ್ಯಾನವನ್ನು ಶೀಘ್ರ ನಿರ್ಮಿಸಲು ಎಚ್ಚೆತ್ತುಕೊಳ್ಳಬೇಕಿದೆ.

Writer - -ಅನಿಲ್ ಕುಮಾರ್, ನಂಜನಗೂಡು

contributor

Editor - -ಅನಿಲ್ ಕುಮಾರ್, ನಂಜನಗೂಡು

contributor

Similar News