ಷೇರುಪೇಟೆಯಲ್ಲಿ ಮೊದಲ ಬಾರಿ 50,000 ಅಂಶ ತಲುಪಿದ ಸೆನ್ಸೆಕ್ಸ್

Update: 2021-01-21 05:45 GMT

ಹೊಸದಿಲ್ಲಿ: ದೇಶದ  ಷೇರುಪೇಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 50,000 ಅಂಶಗಳನ್ನು ದಾಟಿದೆ.

335 ಅಂಕಗಳಷ್ಟು ಏರಿಕೆ ಕಂಡ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ 50,126.73 ಅಂಶಗಳಿಗೆ ತಲುಪಿದೆ. ನಿಫ್ಟಿ ಮೊದಲ ಬಾರಿ 14,700  ಮಾರ್ಕ್ ತಲುಪಿದೆ.

ಫ್ಯೂಚರ್ ಗ್ರೂಪ್ ನೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್  24,713 ಕೋ.ರೂ. ಒಪ್ಪಂದಕ್ಕೆ ಸೆಬಿ ಸಮ್ಮತಿಸಿದ ಬೆನ್ನಲ್ಲೇ ರಿಲಯನ್ಸ್ ಷೇರು ಜಿಗಿದಿದೆ. ಇದರೊಂದಿಗೆ ಷೇರುಪೇಟೆಗಳ ಸೂಚ್ಯಂಕ ಏರುಗತಿಯಲ್ಲಿದೆ.

ರಿಲಯನ್ಸ್ ಷೇರು ಶೇ.2.30ರಷ್ಟು ಗಳಿಕೆಯೊಂದಿಗೆ ಪ್ರತಿ ಷೇರು 2,102 ರೂ.ರಲ್ಲಿ ವಹಿವಾಟು ಗಳಿಸಿದೆ.

ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದರ ಪರಿಣಾಮ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮ ವಹಿವಾಟು ದಾಖಲಾಗಿದೆ. ದೇಶದ ಷೇರುಪೇಟೆಗಳ ಮೇಲೂ ಇದರ ಪರಿಣಾಮ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News