ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿಗೆ ಗಲ್ಫ್ ಸತ್ಯಧಾರ 'ಹ್ಯಾಂಡ್ಸ್ ಆಫ್ ಹುಮ್ಯಾನಿಟಿ ಅವಾರ್ಡ್ 2020'

Update: 2021-01-21 11:28 GMT

ದುಬೈ: ಕೋವಿಡ್ ಕಾಲದಲ್ಲಿ ಕೋವಿಡ್ ಯೋಧರಾಗಿ ಮಾನವೀಯ ಸೇವೆ ಸಲ್ಲಿಸಿದ ವಿಖಾಯ ಕಾರ್ಯಕರ್ತರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಗಲ್ಫ್ ಸತ್ಯಧಾರ ದುಬೈ ಸುನ್ನಿ ಸೆಂಟರ್ ಅಧ್ಯಕ್ಷ ಸಯ್ಯದ್ ಕೋಯಮ್ಮ ತಂಙಳ್ ಅವರ ಅಧ್ಯಕ್ಷತೆಯಲ್ಲಿ  ದುಬೈ ಫ್ಲೊರಾ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕೋವಿಡ್ ಕಾಲದಲ್ಲಿ ಉನ್ನತ ಸೇವೆ ಸಲ್ಲಿಸಿದ ಕೋವಿಡ್ ಯೋಧರಿಗೆ ಗಲ್ಫ್ ಸತ್ಯಧಾರ ಕೊಡಮಾಡುವ 'Hands of Humanity Award 2020' ಪ್ರಶಸ್ತಿ ಮತ್ತು ಎಸ್ಕೆಎಸ್ಸೆಸ್ಸೆಫ್ ಯುಎಇ ರಾಷ್ಟ್ರೀಯ ಸಮಿತಿಯ ಅಭಿನಂದನಾ ಪ್ರಮಾಣ ಪತ್ರ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಲ್ ಪಾಣಕ್ಕಾಡ್ ಅವರು ವಿಖಾಯ ಕರ್ನಾಟಕ ಯುಎಇ ಸಮಿತಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.

ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಯುಎಇ ಸಮಿತಿಯ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ವಿಖಾಯ ಸಮಿತಿಯ ವತಿಯಿಂದ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಯು.ಎ.ಇ.ಯಲ್ಲಿ ಸಂಕಷ್ಟದಲ್ಲಿದ್ಷ ಅನಿವಾಸಿ ಕನ್ನಡಿಗರಿಗೆ ಆಹಾರ, ಔಷಧಿ ಮತ್ತು ಊರಿಗೆ ತಲುಪಲು ಕಷ್ಟದಲ್ಲಿದ್ದವರಿಗೆ ಚಾರ್ಟರ್  ಫ್ಲೈಟ್ ಮೂಲಕ ಊರಿಗೆ ಕರೆ ತರುವ ವ್ಯವಸ್ಥೆಯನ್ನು ಮಾಡಲಾಗಿತ್ತು ಹಾಗೂ ಇತ್ತೀಚಿಗೆ ದುಬೈ ಮೂಲಕ ಸೌದಿಗೆ ತೆರಲುತ್ತಿದ್ದ ಅನಿವಾಸಿ ಕನ್ನಡಿಗರಿಗೆ ಕೊರಟೈಂನ್ ವ್ಯವಸ್ಥೆಯನ್ನು ಮಾಡಿ ಕೊಡಲಾಗಿತ್ತು. ಹೀಗೆ ವಿವಿಧ ಸೇವಾ ಕಾರ್ಯದಲ್ಲಿ ಸದಾ ತೊಡಗಿಸಿ ಕೋವಿಡ್ ಕಾಲದಲ್ಲಿ ಉನ್ನತ ಸೇವೆ ಸಲ್ಲಿಸಿತ್ತು.

ಈ ಸಂದರ್ಭ ಸಮಸ್ತ ಕೇರಳ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಸಲಾಮ್ ಬಾಖವಿ, ಸಯ್ಯದ್ ಕೋಯಮ್ಮ ತಂಙಳ್, ಎಸ್ಕೆಎಸ್ಸೆಸ್ಸೆಫ್ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸಯ್ಯದ್ ಶೊಹೈಬ್ ತಂಙಳ್ ಅವರಿಂದ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಯುಎಇ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಗರ್ ಅಲೀ ತಂಙಳ್, ವಿಖಾಯ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ನವಾಝ್ ಬಿಸಿರೋಡ್ ಮತ್ತು ಕನ್ವೀನರ್ ಅಬ್ದುಲ್ ಅಝೀಝ್ ಸೋಂಪಾಡಿ ಅವರು ಸೇರಿದಂತೆ ಕೋವಿಡ್ ಯೋಧರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News