ಪಿಪಿಇ ಕಿಟ್ ಧರಿಸಿ ಕೋಟ್ಯಂತರ ಮೌಲ್ಯದ ಚಿನ್ನ ದರೋಡೆಗೈದ ವ್ಯಕ್ತಿಯ ಬಂಧನ

Update: 2021-01-21 09:30 GMT

ಹೊಸದಿಲ್ಲಿ: ಸಿನಿಮೀಯ ಶೈಲಿಯಲ್ಲಿ ನಡೆದ ಕಳ್ಳತನ ಪ್ರಕರಣವೊಂದರಲ್ಲಿ ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ)ಕಿಟ್ ಧರಿಸಿದ ವ್ಯಕ್ತಿಯೊಬ್ಬ ದಿಲ್ಲಿಯ ಆಭರಣ ಶೋ ರೂಮ್ ಗೆ ನುಗ್ಗಿ 13 ಕೋ.ರೂ. ಮೌಲ್ಯದ 25 ಕೆಜಿ ತೂಕದ ಚಿನ್ನಾಭರಣವನ್ನು ಕದ್ದಿರುವ ಘಟನೆ ನಡೆದಿದೆ. 48 ಗಂಟೆಯೊಳಗೆ ಕಳ್ಳನನ್ನು  ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ಪಿಪಿಇ ಕಿಟ್ ಧರಿಸಿ ಆಭರಣದ ಅಂಗಡಿಗೆ ಪ್ರವೇಶಿಸಿದ ಆಪಾದಿತ ಕಳ್ಳನ ಗುರುತನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲಾಗಿದೆ. ಕಳ್ಳ ಪಕ್ಕದ ಕಟ್ಟಡದ ಟೆರೇಸ್ ಮೂಲಕ ಆಭರಣದ ಅಂಗಡಿಗೆ ನುಗ್ಗಿದ್ದಾನೆ. ಕಳ್ಳತನವಾಗುವಾಗ ಐವರು ಶಸ್ತ್ರಸಜ್ಜಿತ ಗಾರ್ಡ್ ಗಳು ಕರ್ತವ್ಯದಲ್ಲಿದ್ದರು. ಆದರೆ ಬುಧವಾರ ಮುಂಜಾನೆ ಕಳ್ಳತನವಾಗುವಾಗ ಭದ್ರತಾ ಸಿಬ್ಬಂದಿಯ ಅರಿವಿಗೆ ಬಂದಿಲ್ಲ.

ವ್ಯಕ್ತಿ ಕದ್ದ ಚಿನ್ನವನ್ನು ಆಟೋ ರಿಕ್ಷಾದಲ್ಲಿ ಸಾಗಿಸಿದ್ದಾನೆ. ಚಿನ್ನ ದರೋಡೆಗೈದಿರುವ ವ್ಯಕ್ತಿಯು ಕರ್ನಾಟಕದ ಹುಬ್ಬಳ್ಳಿ ಮೂಲದವನು. ಈತ ದಕ್ಷಿಣ ದಿಲ್ಲಿಯ ಕಲ್ಕಿಜ್ ನಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇದು ಆಭರಣದ ಅಂಗಡಿಯ ಸಮೀಪವೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News