ಪುಣೆ: ಸೀರಮ್ ಸಂಸ್ಥೆಯಲ್ಲಿ ಬೆಂಕಿ ಆಕಸ್ಮಿಕ

Update: 2021-01-21 10:29 GMT

ಪುಣೆ: ನಗರದಲ್ಲಿರುವ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ನಿರ್ಮಾಣ ಹಂತದ ವ್ಯವಸ್ಥೆಯಲ್ಲಿ  ಬೆಂಕಿ ಕಾಣಿಸಿಕೊಂಡಿದೆ. ಇದು ಕೊರೋನ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯ ಮೇಲೆ ಪರಿಣಾಮಬೀರುವುದಿಲ್ಲ. ಸೀರಮ್ ಸಂಸ್ಥೆಯು  ಆಕ್ಸ್ ಫರ್ಡ್  ಯುನಿವರ್ಸಿಟಿಯ ಹಾಗೂ ಆಸ್ಟ್ರಾ ಝನೆಕಾ ಜೊತಗೂಡಿ  ಕೋವಿಡ್-19 ಪಿಡುಗಿನ ವಿರುದ್ಧ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ.

ಬೆಂಕಿಯನ್ನು ನಂದಿಸಲು ತೀವ್ರ ಪ್ರಯತ್ನ ಮುಂದುವರಿದಿದೆ.

ಸೀರಮ್ ಇನ್‍ಸ್ಟಿಟ್ಯೂಟ್ ಆಫ್  ಇಂಡಿಯಾ ವು ವಿಶ್ವದ ಅತ್ಯಂತ ದೊಡ್ಡ  ಲಸಿಕೆ ತಯಾರಕ ಎಂಬ ಹೆಮ್ಮೆ ತನ್ನದಾಗಿಸಿಕೊಂಡಿರುವ ಸಂಸ್ಥೆಯಾಗಿದೆ. ಇದು ಪುಣೆಯ 100 ಎಕರೆ ಜಾಗದಲ್ಲಿದೆ.

ಮಂಜರಿ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಉತ್ಪಾದನಾ ಸೌಲಭ್ಯದಿಂದ ಕೆಲವೇ ನಿಮಿಷಗಳ ದೂರದಲ್ಲಿದೆ. ಇದು ವಿಶೇಷ ಆರ್ಥಿಕ ವಲಯದ ಒಂದು ಭಾಗವೆಂದು ನಂಬಲಾಗಿದೆ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News