ಉಡುಪಿ : ಗುರುವಾರ 720 ಮಂದಿಯಿಂದ ಲಸಿಕೆ ಸ್ವೀಕಾರ

Update: 2021-01-21 13:50 GMT

ಉಡುಪಿ, ಜ.20: ಉಡುಪಿ ಗುರುವಾರ ವೈದ್ಯರೂ ಸೇರಿದಂತೆ 1500 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ 720 ಮಂದಿ ಕೊರೋನಾ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಇದು ದಿನದ ನಿಗದಿತ ಗುರಿಯ ಶೇ.48ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಕೋವಿಡ್ ವಿರುದ್ಧದ ವ್ಯಾಕ್ಸಿನೇಷನ್‌ನ ಮೊದಲ ಹಂತದಲ್ಲಿ ಜಿಲ್ಲೆಯ ಒಟ್ಟು 22,103 ಮಂದಿ ಕೊರೋನಾ ವಾರಿಯರ್ಸ್‌ಗೆ ಲಸಿಕೆಯನ್ನು ನೀಡುವ ಗುರಿ ಹೊಂದಿದ್ದು, ಇದುವರೆಗೆ ಲಸಿಕೆ ಪಡೆಯಬೇಕಿದ್ದ 3118ಯಲ್ಲಿ 2159 ಮಂದಿ ಮಾತ್ರ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಶೇ.69.2ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದವರು ವಿವರಿಸಿದರು.

 ಶುಕ್ರವಾರ ಜಿಲ್ಲೆಯ ಒಟ್ಟು 55 ಕಡೆಗಳಲ್ಲಿ ಗುರುತಿಸಿದ 5007 ಮಂದಿಗೆ ಕೊರೋನ ಲಸಿಕೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News