ಉಡುಪಿ: ಪತ್ರಕರ್ತ ಅರ್ನಬ್ ಬಂಧನಕ್ಕೆ ಆಗ್ರಹಿಸಿ ಎಸ್ಡಿಪಿಐ ಪ್ರತಿಭಟನೆ

Update: 2021-01-21 14:04 GMT

ಉಡುಪಿ, ಜ.21: ದೇಶಕ್ಕೆ ವಿಶ್ವಾಸಾಘಾತ ಮಾಡಿದ ಆರೋಪದಲ್ಲಿ ರಿಪಬ್ಲಿಕ್ ಟಿ.ವಿ.ಯ ಅರ್ನಬ್ ಗೋಸ್ವಾಮಿ ವಿರುದ್ಧ ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಬುಧವಾರ ಬೃಹತ್ ಪ್ರತಿಭಟನಾ ಸಭೆ ಅಜ್ಜರಕಾಡಿನ ಹುತಾತ್ಮರ ಸ್ಮಾರಕ ಭವನದ ಎದುರು ನಡೆಯಿತು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಎಸ್‌ಡಿಪಿಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಉಚ್ಚಿಲ, ಇಂತಹ ನಕಲಿ ಪತ್ರಕರ್ತರು ದೇಶದ ಅಂತರಿಕ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ. ನಕಲಿ ರಾಷ್ಟ್ರಿಯವಾದಿ ಪತ್ರಕರ್ತ ಅರ್ನಬ್ನನ್ನು ತಕ್ಷಣವೇ ಬಂಧಿಸಿ, ಈತನ ವಿರುದ್ದ ಮಹಾರಾಷ್ಟ್ರ ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಸಭೆಯನ್ನುದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ಜಿಲ್ಲಾಧ್ಯಕ್ಷ ಇಲ್ಯಾಸ್ ಸಾಸ್ತಾನ, 2019ರ ಫೆ.26ರಂದು ನಡೆದ ಬಾಲಾಕೋಟ್ ದಾಳಿಗೆ ಮೊದಲೇ ಪತ್ರಕರ್ತ ಅರ್ನಬ್ಗೆ ರಹಸ್ಯ ಮೂಲದಿಂದ ಈ ಬಗ್ಗೆ ಮಾಹಿತಿ ಬಂದಿದೆ. ತಮ್ಮ ಟಿ.ವಿ ಚಾನಲ್ನ ಟಿಆರ್ಪಿಗಾಗಿ ರಾಷ್ಟ್ರದೊಂದಿಗೆ ಅರ್ನಬ್ ಆಟ ಆಡಿ, ಸರಕಾರದ ರಹಸ್ಯ ಬಿಟ್ಟುಕೊಟ್ಟಿದ್ದಾರೆ. ದೇಶದ ಅಂತರಿಕ ಭದ್ರತೆಗೆ ಅಪಾಯಕಾರಿ ಯಾಗಿರುವ ನಕಲಿ ರಾಷ್ಟ್ರಿಯವಾದಿ ಪತ್ರಕರ್ತ ಅರ್ನಬ್ನನ್ನು ತಕ್ಷಣವೇ ಬಂಧಿಸಿ, ಈತನ ವಿರುದ್ದ ಮಹಾರಾಷ್ಟ್ರ ಸರಕಾರ ಉನ್ನತ ಮಟ್ಟದ ನಿಖೆ ನಡೆಸುವಂತೆ ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ವಹಾಬ್ ಮೂಳೂರು, ರಫೀಕ್ ಪೊಲಿಪು, ಶಂಶುದ್ದಿನ್ ಎಸ್.ಕೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶ್ರಫ್ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News