ಪೈಪ್‌ಲೈನ್ ಕಾಮಗಾರಿ: ವಾಹನ ಸಂಚಾರ ನಿಷೇಧ

Update: 2021-01-21 14:27 GMT

ಉಡುಪಿ, ಜ.21: ಉಡುಪಿ ನಗರಸಭಾ ವ್ಯಾಪ್ತಿಯ ಕುಂಜಿಬೆಟ್ಟು ವಾರ್ಡಿನ ಶಾರದನಗರ ರಸ್ತೆಯಲ್ಲಿ (ವಿದ್ಯೋದಯ ಶಾಲೆ ರಸ್ತೆ) ಆಳಗುಂಡಿಗಳ ಮರು ನಿರ್ಮಾಣ ಮತ್ತು ಪೈಪ್‌ಲೈನ್ ಬದಲಾವಣೆ ಕಾಮಗಾರಿಯು ಇಂದಿನಿಂದ ಫೆ.5ರವರೆಗೆ ನಡೆಯಲಿರುವು ದರಿಂದ, ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News