ಕಾಪು ತಾಲೂಕಿನ 16 ಗ್ರಾಪಂಗಳಿಗೆ ಮೀಸಲಾತಿ ಪ್ರಕಟ

Update: 2021-01-21 15:03 GMT

ಉಡುಪಿ, ಜ.21: ಉಡುಪಿ ಜಿಲ್ಲೆಯ ಕಾಪು ತಾಲೂಕಿನ 16 ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ಪಂಚಾಯತ್‌ನ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಗುರುವಾರ ಮೀಸಲಿರಿಸಿ ಹಂಚಿಕೆ ಮಾಡಲಾಗಿದ್ದು, 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ವಿವರ ಹೀಗಿದೆ.

ಬೆಳ್ಳೆ ಗ್ರಾ.ಪಂ: ಅಧ್ಯಕ್ಷ -ಹಿಂದುಳಿದ ವರ್ಗ ಅ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಕುರ್ಕಾಲು ಗ್ರಾ.ಪಂ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ, ಶಿರ್ವ ಗ್ರಾ.ಪಂ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಇನ್ನಂಜೆ ಗ್ರಾ.ಪಂ: ಅಧ್ಯಕ್ಷ -ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ -ಸಾಮಾನ್ಯ, ಕಟಪಾಡಿ ಗ್ರಾ.ಪಂ: ಅಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ಕೋಟೆ ಗ್ರಾ.ಪಂ: ಅದ್ಯಕ್ಷ -ಹಿಂದುಳಿದ ವರ್ಗ ಅ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಮಜೂರು ಗ್ರಾ.ಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ, ಕುತ್ಯಾರು ಗ್ರಾ.ಪಂ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಮುದರಂಗಡಿ ಗ್ರಾ.ಪಂ: ಅಧ್ಯಕ್ಷ- ಹಿಂದುಳಿದ ವರ್ಗ ಬ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಬೆಳಪು ಗ್ರಾ.ಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ, ಬಡಾ ಗ್ರಾ.ಪಂ: ಅಧ್ಯಕ್ಷ- ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ ಅ ಮಹಿಳೆ, ಎಲ್ಲೂರು ಗ್ರಾ.ಪಂ: ಅಧ್ಯಕ್ಷ -ಸಾಮಾನ್ಯ, ಉಪಾಧ್ಯಕ್ಷ- ಅನುಸೂಚಿತ ಜಾತಿ ಮಹಿಳೆ, ಪಲಿಮಾರು ಗ್ರಾ.ಪಂ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ ಬ ಮಹಿಳೆ, ತೆಂಕ ಗ್ರಾ.ಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ -ಸಾಮಾನ್ಯ, ಪಡುಬಿದ್ರೆ ಗ್ರಾ.ಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ - ಸಾಮಾನ್ಯ ಮಹಿಳೆ, ಹೆಜಮಾಡಿ ಗ್ರಾ.ಪಂ: ಅಧ್ಯಕ್ಷ-ಸಾಮಾನ್ಯ, ಉಪಾದ್ಯಕ್ಷ-ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News