ರ್‍ಯಾಗಿಂಗ್ ಆರೋಪ : ಕಾಲೇಜು ಬಿಡಲು ಮುಂದಾದ ವಿದ್ಯಾರ್ಥಿ !

Update: 2021-01-21 17:09 GMT

ಮಂಗಳೂರು, ಜ.21: ನಗರದ ಹೊರವಲಯದ ಕಾಲೇಜೊಂದರ ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ನಡೆಸಿದ ಪರಿಣಾಮ ಕಿರಿಯ ವಿದ್ಯಾರ್ಥಿಯೋರ್ವ ಕಾಲೇಜು ಬಿಡಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದ್ದು, ಹಿರಿಯ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಕಾಲೇಜೊಂದರ ಬಿ ಫಾರ್ಮಾ ವಿದ್ಯಾರ್ಥಿ ಗುರುವಾರ ಮಧ್ಯಾಹ್ನ ಕಾಲೇಜು ಮುಗಿಸಿ ಹಾಸ್ಟೆಲ್ ಕಡೆಗೆ ಬರುತ್ತಿದ್ದಾಗ ಹಿರಿಯ ವಿದ್ಯಾರ್ಥಿಗಳು ಅಡ್ಡಗಟ್ಟಿ ತಲೆ ಕೂದಲು ಹಾಗೂ ಮೀಸೆ ತೆಗೆದು ಬರಬೇಕೆಂದು ಜೋರು ಮಾಡಿದ್ದರು. ಓರ್ವ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದ. ಕೆಲವು ದಿನಗಳ ಬಳಿಕ ತಲೆಕೂದಲು ಹಾಗೂ ಮೀಸೆ ತೆಗೆಯದಿದ್ದರೆ ನಾವೇ ಕತ್ತರಿಸುತ್ತೇವೆ ಎಂದು ಬೆದರಿಕೆಯೊಡ್ಡಿ ಮತ್ತೆ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಿರಿಯ ವಿದ್ಯಾರ್ಥಿ ತಾಯಿಗೆ ವಿಷಯ ತಿಳಿಸಿದ್ದು, ಅದೇ ದಿನ ಮನೆಗೆ ಕರೆದೊಯ್ದಿದ್ದರು. ಆ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಲೇಜಿಗೆ ಪಾವತಿಸಿದ 1.63 ಲಕ್ಷ ರೂ. ಹಾಗೂ ದಾಖಲೆ ಪತ್ರಗಳನ್ನು ಹಿಂತಿರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News