ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಡಾ. ರವಿ ಸೂರಾಲು ಆಯ್ಕೆ

Update: 2021-01-21 17:05 GMT

ಮಂಗಳೂರು : ಕಾರ್ಕಳ ಹಿರ್ಗಾನದ ಶ್ರೀ ಕುಂದೇಶ್ವರ ಕ್ಷೇತ್ರದಿಂದ ನೀಡಲಾಗುವ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಈ ಬಾರಿ ಸೌಕೂರು ಮೇಳದ ಭಾಗವತ ಡಾ. ರವಿಕುಮಾರ್ ಸೂರಾಲು ಅವರಿಗೆ ನೀಡಲಾಗುವುದು.

ಜ.23ರಂದು ರಾತ್ರಿ 9 ಗಂಟೆಗೆ ಹಿರ್ಗಾನ ಶ್ರೀಕುಂದೇಶ್ವರ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭ ಸೌಕೂರು ಮೇಳದವರಿಂದ ಪುಷ್ಪಚಂದನ ಯಕ್ಷಗಾನ ಬಯಲಾಟ ನಡೆಯಲಿದೆ.

ರವಿ ಸೂರಾಲು ಹಿನ್ನೆಲೆ

ದಿ. ಕಾಳಿಂಗ‌ ನಾವುಡ, ಗೋಪಾಲ ಗಾಣಿಗ ಅವರ ಗರಡಿಯಲ್ಲಿ ಪಳಗಿರುವ ರವಿ ಕುಮಾರ್, ಹಂಗಾರಕಟ್ಟೆ ಕೇಂದ್ರದಲ್ಲಿ ಕೆ.ಪಿ.ಹೆಗಡೆ ಅವರಿಂದ ಭಾಗವತಿಕೆ ಕಲಿತರು. ಈಗ ಸೌಕೂರು ಮೇಳದ ಪ್ರಧಾನ ಭಾಗವತರಾಗಿದ್ದು, ಸಾಲಿಗ್ರಾಮ, ಮಾರಣಕಟ್ಟೆ, ಬಗ್ವಾಡಿ, ಮಂದಾರ್ತಿ, ಕಮಲಶಿಲೆ ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯಾಸಕ್ತರೂ ಸ್ಯಾಕ್ಸೋಫೋನ್ ವಾದಕರೂ ಅಗಿರುವ ಸೂರಾಲು ಅವರ ವಾದನದ ಅನೇಕ ಧ್ವನಿ ಸುರುಳಿಗಳು ಲೋಕಾರ್ಪಣೆಗೊಂಡಿವೆ. ಜ.21 ರಿಂದ 23ರರೆಗೆ ವರ್ಷಾವಧಿ ಮಹೋತ್ಸವ ನಡೆಯಲಿದೆ.

ಜ. 22ರಂದು ಮಹೋತ್ಸವ, ಅನ್ನಸಂತರ್ಪಣೆ, ರಂಗಪೂಜೆ, ಭೂತ ಬಲಿ, ನೇಮೋತ್ಸವ, ಜ.23ರಂದು ಸಂಪ್ರೋಕ್ಷಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News