ಇಸ್ರೇಲ್ : ಫೈಝರ್ ಲಸಿಕೆ ಪಡೆದ ಬಳಿಕ 12 ಸಾವಿರಕ್ಕೂ ಅಧಿಕ ಜನರಿಗೆ ಕೋವಿಡ್ ಪಾಸಿಟಿವ್

Update: 2021-01-21 17:27 GMT

ಜೆರುಸಲೇಂ: ಕೊರೋನ ವಿರುದ್ಧ ಇತ್ತೀಚೆಗೆ ಆರಂಭಿಸಲಾಗಿರುವ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಊಹಾಪೋಹಗಳು ಹೆಚ್ಚಾಗಿರುವ ನಡುವೆ ಇಸ್ರೇಲ್ ನಲ್ಲಿ ಫೈಝರ್/ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪಡೆದಿರುವ 12,000ಕ್ಕೂಅಧಿಕ ಜನರಿಗೆ ನಡೆಸಿರುವ ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಫೈಝರ್ ಕೋವಿಡ್ ಲಸಿಕೆಯನ್ನು ಪಡೆದ ಬಳಿಕ ಇಸ್ರೇಲ್ ನ ಆರೋಗ್ಯ ಸಚಿವಾಲಯವು 1,80,000 ಜನರಿಗೆ ಕೋವಿಡ್ ಪರೀಕ್ಷೆ ನಡೆಸಿತ್ತು. ಈ ಪೈಕಿ 12,000ಕ್ಕೂ ಅಧಿಕ ಜನರಲ್ಲಿ ಪಾಸಿಟಿವ್ ವರದಿ ಬಂದಿತ್ತು.

ಇಸ್ರೇಲ್ ನಲ್ಲಿ ಲಸಿಕೆ ನೀಡಿಕೆ ಅಭಿಯಾನವನ್ನು ಡಿಸೆಂಬರ್ 19ರಂದು ಆರಂಭಿಸಲಾಗಿತ್ತು. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗಿತ್ತು.

ಇಸ್ರೇಲ್ ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟು ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಶೇ.3.5ರಷ್ಟು ಜನರು ಲಸಿಕೆಯ ಎರಡನೇ ಡೋಸ್ ನ್ನು ಪಡೆದಿದ್ದಾರೆ.

ಹೆಚ್ಚಿನ ಸಂಖ್ಯೆಯ ಜನರು ಲಸಿಕೆ ಸ್ವೀಕರಿಸಿದ್ದರೂ ದೇಶದಲ್ಲಿ ಮೂರನೇ ಲಾಕ್ ಡೌನ್ ಜಾರಿಯಲ್ಲಿದೆ. ಇಸ್ರೇಲ್ ನಲ್ಲಿ ಅತಿ ಹೆಚ್ಚು ಸೋಂಕಿನ ದರ ಇರುವುದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News