ಉಳ್ಳಾಲ ಕೊರಗಜ್ಜನ ಕಟ್ಟೆ ಅಪವಿತ್ರಕ್ಕೆ ಯತ್ನ ಪ್ರಕರಣ : ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಇಂಟಕ್ ಮನವಿ

Update: 2021-01-21 17:26 GMT

ಮಂಗಳೂರು : ಉಳ್ಳಾಲ ಕೊರಗಜ್ಜನ ಕಟ್ಟೆಯ ಹುಂಡಿಯಲ್ಲಿ ವಿಕೃತ ಮನಸ್ಸಿನವರು ಬೇಡದ ವಸ್ತುಗಳನ್ನು ಹಾಕಿ ಅಪವಿತ್ರ ಮಾಡಿ ಕ್ಷೇತ್ರದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡಲು ಪ್ರಯತ್ನಿಸಿದ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಮಂಗಳೂರು ವಿಧಾನ ಸಭಾ ಇಂಟಕ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ಮನವಿ ನೀಡಲಾಯಿತು.

ಮಂಗಳೂರು ವಿಧಾನ ಸಭಾ ಕ್ಷೇತ್ರದ ಇಂಟಕ್ ಅಧ್ಯಕ್ಷ ಹರೀಶ್ ರಾವ್ ಮಾತನಾಡಿ ಮಂಗಳೂರು ಕ್ಷೇತ್ರ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿಯ ಜನ ಬಹಳ ಅನ್ಯೋನ್ಯತೆಯಿಂದ ಜಾತಿ, ಮತ, ಪಂಥವಿಲ್ಲದೆ ಪ್ರೀತಿಯಿಂದ ಬಾಳುತ್ತಿದ್ದಾರೆ. ಸಮಾಜದ ಸಾಮರಸ್ಯಕ್ಕೆ, ಶಾಂತಿಗೆ ಧಕ್ಕೆ ತರುವಂತಹ ಷಡ್ಯಂತ್ರವನ್ನು ಹೂಡಿಕೊಂಡು ಉಳ್ಳಾಲ ಕೊರಗಜ್ಜನ ಕಟ್ಟೆಯ ಹುಂಡಿಯಲ್ಲಿ ವಿಕೃತ ಮನಸ್ಸಿನವರು ಬೇಡದ ವಸ್ತುಗಳನ್ನು ಹಾಕಿ ಅಪವಿತ್ರ ಮಾಡಿ ಕ್ಷೇತ್ರದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡುವ ನಿಟ್ಟಿನಲ್ಲಿ ಕಿಡಿಗೇಡಿಗಳು ವಿಕೃತ ಭಾವನೆಯನ್ನು ಪ್ರದರ್ಶಿಸಿರುತ್ತಾರೆ. ಇದರಿಂದ ಸಹಸ್ರಾರು ಕೊರಗಜ್ಜ ಭಕ್ತರ ಮನಸ್ಸಿಗೆ ನೋವು ಉಂಟು ಮಾಡಿದೆ ಅಲ್ಲದೆ, ಇದು ಒಂದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನೀಯ ಘಟನೆ ಕೂಡ ಆಗಿದೆ. ಕೊಣಾಜೆ ಶ್ರೀ ಗೋಪಾಲ ಕೃಷ್ಣದೇವಸ್ಥಾನದ ಗರ್ಭಗುಡಿ ಬಳಿ ಇದ್ದ ಧ್ವಜ ತೆಗೆದು ಅದಕ್ಕೆ ಮೂತ್ರ ಮಾಡಿ ವಿಕೃತ ಮನಸ್ಸನ್ನು ತೋರಿಸಿರುತ್ತಾರೆ, ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಪರಶೀಲಿಸಿದಾಗ ಇದರ ಹಿಂದೆ ವಿಕೃತ ಮನಸ್ಸಿನ ಹುಡುಗರ ಷಡ್ಯಂತರ ವಿರುವುದು ಖಾತರಿಯಾಗುತ್ತದೆ, ಇಂತಹ ಘಟನೆ ಆಗುತ್ತಿರುವುದರಿಂದ ಜಿಲ್ಲೆಯಲ್ಲಿ ಜಗಳ ಮಾಡಿಸುತ್ತಿರುವ ಹುನ್ನಾರ ಸ್ಪಷ್ಟವಾಗಿ ಕಾಣುತ್ತಿದೆ, ಈ ರೀತಿಯ ಅವಮಾನೀಯ ಘಟನೆಯನ್ನು ಇಂಟಕ್ ಮಂಗಳೂರು ವಿಧಾನ ಸಭಾ ಕ್ಷೇತ್ರ ಉಗ್ರವಾಗಿ ಖಂಡಿಸುತ್ತದೆ, ಇದಕ್ಕೆ ಕಾರಣ ಕರ್ತರರಾದ ದುಷ್ಕರ್ಮಿಗಳನ್ನು ಬಂಧಿಸಲು ಇಂಟಕ್ ಆಗ್ರಹಿಸುತ್ತದೆ, ಇಲ್ಲವಾದಲ್ಲಿ ಉಳ್ಳಾಲ ಠಾಣೆಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಕೊರಗಜ್ಜ ಭಕ್ತ ರೋಹಿತ್ ಉಳ್ಳಾಲ್ ಮಾತನಾಡಿದರು.

ಮಂಗಳೂರು ವಿಧಾನ ಸಭಾ ಕ್ಷೇತ್ರದ ಯೂತ್ ಇಂಟಕ್ ಅಧ್ಯಕ್ಷ ಸಿದ್ದೀಕ್ ಹಸನ್, ಉಳ್ಳಾಲ ಕೊರಗಜ್ಜ ಗುಳಿಗಜ್ಜ ಸಮಿತಿಯ ಅಧ್ಯಕ್ಷ ಸುನೀಲ್, ಯುವ ಇಂಟಕ್ ನಾಯಕರಾದ ದೀಕ್ಷಿತ್.ವಿ.ಶೆಟ್ಟಿ, ಸಿರಾಜುದ್ದೀನ್, ಮುನೀರ್ ಬಾವ, ಬಾಸ್ಕರ್ ಮಡ್ಯಾರ್, ಅಬ್ದುಲ್ ಅಝೀಝ್ ಹಕ್, ಅಮಿತ್ ರಾಜ್ ಬೇಕಲ್, ವಿಶಾಲ್ ಕೊಲ್ಯ, ಮನೋಜ್ ಶೆಟ್ಟಿ, ಸೃಜನ್ ಶೆಟ್ಟಿ, ನಝೀರ್ ಬೆಳ್ಳಾರೆ, ರಾಜೇಂದ್ರ ಭಂಡಸಾಲೆ, ಪ್ರಶಾಂತ್ ಬಜಾಲ್, ವಿಶ್ವತ್ ಕೊಲ್ಯ, ವಿಶ್ವನಾಥ್ ಪೂಜಾರಿ, ನಿಯಾಝ್, ಕಿಶೋರ್ ತೊಕ್ಕೋಟ್ಟು, ಕೆ.ಎಂ.ಅಬ್ದುರ್ರಹ್ಮಾನ್ ಕೋಡಿಜಾಲ್, ಮುನ್ನೂರು ಗ್ರಾಮ ಇಂಟಕ್ ಅಧ್ಯಕ್ಷ ನಿಸಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News