ವಿಶ್ವಕರ್ಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ

Update: 2021-01-22 12:34 GMT

ಉಡುಪಿ, ಜ. 22: ವಿಶ್ವಕರ್ಮ ಸೇವಾ ಸಂಘ ಮತ್ತು ಕಾಳಿಕಾಂಬಾ ಮಹಿಳಾ ಮಂಡಳಿಯ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆಯು ಜ.17ರಂದು ಉಡುಪಿ ಚಿಟ್ಪಾಡಿಯ ವಿಶ್ವಕರ್ಮ ಸೇವಾ ಸಂಘದ ಕಟ್ಟಡದಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಉಡುಪಿ ವಕೀಲ ಮಾಧವ ಆಚಾರ್ಯ ಮಾತ ನಾಡಿ, ಸರಳ ಜೀವನ ನಡೆಸಿದರೂ ಜನ ನಮ್ಮನ್ನು ಗುರುತಿಸುತ್ತಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಹಿರಿಯರು ನಡೆಸಿಕೊಂಡು ಬಂದಂತಹ ಆಚಾರ ವಿಚಾರಗಳನ್ನು ನಾವೂ ಮುಂದುವರೆಸಿಕೊಂಡು ಹೋಗಬೇಕು. ಅದು ನಮಗೆ ಶ್ರೀರಕ್ಷೆಯಾಗಿ ನಮ್ಮನ್ನು ಕಾಪಾಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾಸಲಾಯಿತು. ಅಧ್ಯಕ್ಷತೆಯನ್ನು ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ವಹಿಸಿದ್ದರು.

ಕಟಪಾಡಿಯ ಪುರೋಹಿತ್ ಶಶಿಧರ್ ಆಚಾರ್ಯ, ವಿಶ್ವಕರ್ಮ ಸೇವಾ ಸಂಘದ ಗೌರವಾಧ್ಯಕ್ಷ ಶೇಖರ ಆಚಾರ್ಯ, ಜನಾರ್ದನ ಎಸ್.ಸತೀಶ್, ಮಹೇಶ್, ರಾಜೇಶ್ ಎಸ್., ಕಾಳಿಕಾಂಬಾ ಮಹಿಳಾ ಮಂಡಳಿ ಅಧ್ಯಕ್ಷೆ ಯಶೋಧಾ ಜಿ. ಆಚಾರ್ಯ, ಉಪಾಧ್ಯಕ್ಷೆ ಅಕ್ಷತಾ ಸುಧಾಕರ ಆಚಾರ್ಯ, ಗೌರವಾಧ್ಯಕ್ಷೆ ಉಷಾ ಭಾಸ್ಕರ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಜ್ಯೋತಿ ಗಣೇಶ್ ಆಚಾರ್ಯ, ಗಂಗಾಧರ ಆಚಾರ್ಯ ಮುನಿಯಾಲು, ಹರೀಶ್ ಉಪ್ಪೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News