ವಿದ್ಯಾರ್ಥಿಗಳ ಸಮರ್ಥ ನಾಯಕತ್ವ ಗುಣಗಳೇ ಭವಿಷ್ಯದ ಮೆಟ್ಟಿಲು: ದೇವದಾಸ್

Update: 2021-01-22 12:39 GMT

ಶಿರ್ವ, ಜ.22: ಶಿಕ್ಷಣ ಕೇವಲ ಓದು ಅಥವಾ ಪುಸ್ತಕದ ಜ್ಞಾನವಲ್ಲ. ಇದು ಮಾನವತೆಯ ವಿಕಾಸದ ತಳಹದಿ. ಶಿಕ್ಷಣ ಪರಿಪೂರ್ಣ ವಾಗಲು ವಿದ್ಯಾರ್ಥಿ ಗಳಲ್ಲಿ ಯಾವುದಾದರೂ ಉತ್ತಮ ಹವ್ಯಾಸ ಅಥವಾ ನಾಯಕತ್ವ ಗುಣ ಅಗತ್ಯ. ಸಹನೆ, ಶೃದ್ಧೆ, ಪ್ರಾಮಾಣಿ ಕತೆ, ವಿನಯತೆ, ಶಿಸ್ತು ಅಳವಡಿಸಿಕೊಂಡಾಗ ವ್ಯಕ್ತಿತ್ವದ ವಿಕಸನವಾಗಿ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ. ವಿದ್ಯಾರ್ಥಿಗಳ ಸಮರ್ಥ ನಾಯಕತ್ವ ಗುಣಗಳೇ ಉಜ್ವಲ ಭವಿಷ್ಯದ ಮೆಟ್ಟಿಲು ಎಂದು ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವದಾಸ್ ಕೆ. ಹೇಳಿದ್ದಾರೆ.

ಶಿರ್ವ ಸಂತಮೇರಿ ಕಾಲೇಜಿನ ಸ್ಟೂಡೆಂಟ್ಸ್ ವೆಲ್ಫೇರ್ ಕೌನ್ಸಿಲ್ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾ ಡುತಿದ್ದರು. ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಮೊದಲು ತಿಳಿದುಕೊಳ್ಳಬೇಕೆ ಹೊರತು ಅಧಿಕಾರವನ್ನಲ್ಲ. ಜೀವನದಲ್ಲಿ ಸಮಸ್ಯೆಗಳು ಸ್ವಾಭಾವಿಕ. ಅದರನ್ನು ಎದುರಿಸಿ ಮುನ್ನುಗ್ಗುವ ಛಲ, ಕಲಿಯುವ ಹಂಬಲ, ಆಸೆ, ದೃಢತೆ, ತಾಳ್ಮೆ ಇದ್ದಾಗ ಪ್ರತಿಭೆ ತಾನಾಗಿಯೇ ಬೆಳೆಯುತ್ತದೆ ಎಂದರು.

ಅಧ್ಯಕ್ಷತೆಯನ್ನು ಆರೋಗ್ಯಮಾತಾ ದೇವಾಲಯದ ಪ್ರಧಾನ ಧರ್ಮಗುರು ಹಾಗೂ ಸಂಸ್ಥೆಯ ಸಂಚಾಲಕ ರೆ.ಫಾ.ಡೆನಿಸ್ ಅಲೆಗ್ಸಾಂಡರ್ ಡೇಸಾ ವಹಿಸಿ ದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಹೆರಾಲ್ಡ್ ಐವನ್ ಮೋನಿಸ್ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಕೌನ್ಸಿಲ್‌ನ ಕಾರ್ಯ ದರ್ಶಿ ಶೈಲಾ ವಿಯೋನಾ ಕೆಸ್ತಲಿನೋ, ಉಪಾಧ್ಯಕ್ಷ ಮೊಹಮ್ಮದ್ ಮುಬಾಶಿರ್, ಜತೆ ಕಾರ್ಯದರ್ಶಿ ಮೆಲಿಷಾ ಕುಟುನ್ಹೋ, ಕ್ರೀಡಾ ಕಾರ್ಯ ದರ್ಶಿ ದೀಕ್ಷಿತ್, ಜೋಸಿತಾ ಮೆಲ್‌ರಿನ್ ಮೆಂಡೋನ್ಸಾ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರತಿಮಾ ಆಚಾರ್ಯ ಉಪಸ್ಥಿತರಿದ್ದರು.

ಕಾಲೇಜಿನ ಕ್ಷೇಮಪಾಲನಾ ನಿರ್ದೇಶಕಿ ಪ್ರೊ.ಯಶೋದಾ ಪ್ರಾಸ್ತಾವಿಕವಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ದಾಕ್ಷಾಯಿಣಿ ವಂದಿಸಿರು. ಕೃಪಾ ಆಚಾರ್ಯ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News