ಹೆಬ್ರಿ ತಾಲೂಕಿನ 9 ಗ್ರಾಪಂಗಳಿಗೆ ಮೀಸಲಾತಿ ಪ್ರಕಟ

Update: 2021-01-22 12:43 GMT

ಉಡುಪಿ, ಜ. 22: ಜಿಲ್ಲೆಯ ಹೆಬ್ರಿ ತಾಲೂಕಿನ 9 ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ಪಂಚಾಯತ್‌ನ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಶುಕ್ರವಾರ ಮೀಸಲಿರಿಸಿ ಹಂಚಿಕೆ ಮಾಡಲಾಗಿದ್ದು, 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ವಿವರ ಹೀಗಿದೆ.

ಕುಚ್ಚೂರು: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ ಅ ಮಹಿಳೆ, ನಾಡ್ಪಾಲು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, ಹೆಬ್ರಿ: ಅಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಚಾರಾ: ಅಧ್ಯಕ್ಷ-ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ- ಅನುಸೂಚಿತ ಪಂಗಡ ಮಹಿಳೆ, ಶಿವಪುರ: ಅಧ್ಯಕ್ಷ-ಹಿಂದುಳಿದ ವರ್ಗ ಬ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಮುದ್ರಾಡಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ವರಂಗ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಬ, ಬೆಳ್ವೆ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಮಡಾಮಕ್ಕಿ: ಅಧ್ಯಕ್ಷ-ಅನುಸೂಚಿತ ಪಂಗಡ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯಕ್ಕೆ ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News