ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಕೇಂದ್ರ ಸಮಿತಿಯ ಸದಸ್ಯರಾಗಿ ಆಯ್ಕೆ: ಶರೀಫ್ ಫೈಝಿಗೆ ಸನ್ಮಾನ

Update: 2021-01-22 14:40 GMT

ಪುತ್ತೂರು : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಕೇಂದ್ರ ಸಮಿತಿಯ ನೂತನ ಸದಸ್ಯರಾಗಿ ಆಯ್ಕೆಯಾದ ಹಾಜಿ ಕೆ.ಪಿ.ಎಂ. ಶರೀಫ್ ಫೈಝಿ ಕಡಬ ಅವರನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ವತಿಯಿಂದ ಪುತ್ತೂರಿನ ಸಂಪ್ಯ ಮಸೀದಿ ವಠಾರದಲ್ಲಿ ಸನ್ಮಾನಿಸಲಾಯಿತು.

ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷರಾದ ಸಯ್ಯಿದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಸ್ವಾಗತಿಸಿ, ಕೋಶಾಧಿಕಾರಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ ಉದ್ಘಾಟಿಸಿದರು.

ಕಾರ್ಯಾಧ್ಯಕ್ಷರಾದ ಅಲ್ ಹಾಜ್ ಇಬ್ರಾಹೀಂ ಬಾಖವಿ ಕೆ.ಸಿ ರೋಡು, ಉಪಾಧ್ಯಕ್ಷರಾದ ಕೆ.ಎಂ ಉಸ್ಮಾನುಲ್ ಫೈಝಿ ತೋಡಾರು, ಸಂಘಟನಾ ಕಾರ್ಯದರ್ಶಿ ಹಾಜಿ ಶರೀಫ್ ಫೈಝಿ ಕಡಬ ಸದಸ್ಯರಾದ ಮೂಸಲ್ ಫೈಝಿ ಮಿತ್ತೂರು, ಕೆ.ಎಲ್ ಖಾಸಿಮಿ ಪೇರಾಳ್, ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ, ಖಲೀಲುರ್ರಹ್ಮಾನ್ ದಾರಿಮಿ ಮಾರಿಪಳ್ಳ, ಉಮರ್ ದಾರಿಮಿ ಸಾಲ್ಮರ, ಎಸ್.ಬಿ ಉಸ್ಮಾನ್ ದಾರಿಮಿ ಸೂರಲ್ಪಾಡಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಖಾಸಿಂ ದಾರಿಮಿ ತೋಡಾರು, ಇಬ್ರಾಹೀಂ ದಾರಿಮಿ ಕಡಬ, ಅಬೂಬಕರ್ ಸಿದ್ದೀಕ್ ದಾರಿಮಿ ಕಡಬ, ಕೆ.ಬಿ ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಆದಂ ದಾರಿಮಿ ಅಜ್ಜಿಕಟ್ಟೆ, ಉಮರ್ ಫೈಝಿ ಸಾಲ್ಮರ, ಅಬ್ಬಾಸ್ ಮದನಿ ಗಟ್ಟಮನೆ, ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ, ಹನೀಫ್ ದಾರಿಮಿ ಸವಣೂರು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News