ಫೆ. 6: ಬಹುಭಾಷಾ ಸಾಂಸ್ಕೃತಿಕ ಸಂಭ್ರಮ

Update: 2021-01-22 15:11 GMT

ಮಂಗಳೂರು, ಜ.22: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಹೃದಯವಾಹಿನಿ ಮಂಗಳೂರು ಸಹಯೋಗದಲ್ಲಿ ಕರ್ನಾಟಕ ತುಳು, ಕೊಂಕಣಿ, ಅರೆಭಾಷೆ, ಕೊಡವ ಸಾಹಿತ್ಯ ಅಕಾಡಮಿಗಳ ಸಹಕಾರದಲ್ಲಿ ಫೆ.6ರಂದು ಬೆಳಗ್ಗೆ 10ಕ್ಕೆ ‘ಬಹುಭಾಷಾ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಕಾರವಾರ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಲಿದ್ದು, ಕರ್ನಾಟಕ ಕಾರ್ಮಿಕ ಇಲಾಖೆಯ ಸಚಿವ ಶಿವರಾಮ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ.ಜೆ.ಆರ್. ಮನೋಜ್ ಶರ್ಮ ಗುರೂಜಿ ಆಶೀರ್ವಚನ ನೀಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ. ಅಮ್ಮತಂಡ ಪಾರ್ವತಿ ಅಪ್ಪಯ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ, ಉತ್ತರ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಬಹುಭಾಷಾ ವಿಚಾರಗೋಷ್ಠಿಯು ಬೆಳಗ್ಗೆ 11ರಿಂದ 12ರವರೆಗೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಮುಹಮ್ಮದ್ ಬಡ್ಡೂರ್ ವಹಿಸಲಿದ್ದಾರೆ. ಸಮಾರಂಭದಲ್ಲಿ ರಾಮ ನಾಯ್ಕಾ ಕಾರವಾರ (ಕನ್ನಡ), ಕಾಂತಿ ಶೆಟ್ಟಿ (ತುಳು), ಡಾ. ಅರವಿಂದ್ ಶಾನುಭೋಗ (ಕೊಂಕಣಿ), ಪುರುಷೋತ್ತಮ ಕಿರ್ಲಾಯ (ಅರೆಭಾಷೆ), ಡಾ.ಮುಲ್ಲೇಂಗಡ ರೇವತಿ ಪೂವಯ್ಯ (ಕೊಡವ) ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12ರಿಂದ ಹುಸೈನ್ ಕಾಟಿಪಳ್ಳ ಮತ್ತು ತಂಡ (ಬ್ಯಾರಿ), ಗೋ.ನಾ. ಸ್ವಾಮಿ ಮತ್ತು ತಂಡ (ಕನ್ನಡ), ಕುಂಜಿಲಗೇರಿ ಕಲಾ ತಂಡ (ಕೊಡವ), ಕಲಾಕುಂಬ ಕುಳಾಯಿ (ತುಳು), ಮಿತ್ರ ಬಳಗ ಕಾಯರ್ತೋಡಿ (ಅರೆಭಾಷೆ), ವಿಷ್ಣು ರಾಣೆ ಗುಮುಟಾ ವಾದನ ಕಿನ್ನರ ಕಾರವಾರ (ಕೊಡವ), ವಿಜೇತ ಭಂಡಾರಿ ನೃತ್ಯ ಸ್ವರ ಕಲಾ ಟ್ರಸ್ಟ್ ಕುಮುಟಾ, ಅನುರಾಧ ಹೆಗಡೆ ನೂಪುರ ನೃತ್ಯಶಾಲೆ ಶಿರಸಿ ಇವರಿಂದ ಬಹುಭಾಷಾ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಬಹುಭಾಷಾ ಕವಿಗೋಷ್ಠಿಯು ಮಧ್ಯಾಹ್ನ 2ರಿಂದ 3ರವರೆಗೆ ನಡೆಯಲಿದ್ದು, ಬಿ.ಎ. ಮುಹಮ್ಮದ್ ಅಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಕಾಸರಗೋಡು ಅಶೋಕ್ ಕುಮಾರ್ (ಕನ್ನಡ), ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ (ತುಳು), ನಾಗೇಶ್ ಅಣ್ವೇಕರ (ಕೊಂಕಣಿ), ಕುಡಿಯರ ಮುತ್ತಪ್ಪ (ಕೊಡವ), ಸೀತಾ ಅಮೃತ ರಾಜ್ (ಅರೆಭಾಷೆ) ಕವಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 5ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಘನ ಉಪಸ್ಥಿತಿ ಯಾಗಿ ಭಾಗವಹಿಸಲಿದ್ದು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಮಿಲ್ಕ್ ಫೆಡರೇಶನ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News