ರೈತ ವಿರೋಧಿ ಕಾಯಿದೆ ಜಾರಿಯಾದರೆ ಪಡಿತರ ವ್ಯವಸ್ಥೆಗೂ ಹಾನಿ : ಯು.ಟಿ. ಖಾದರ್

Update: 2021-01-22 16:45 GMT

ಮಂಗಳೂರು : ಬಿಜೆಪಿ ನೇತೃತ್ವದ ಸರಕಾರ ರೈತ ವಿರೋಧಿ ನೀತಿಯನ್ನು ಜಾರಿ ಮಾಡಲು ಹೊರಟರೆ ಪಡಿತರ ವ್ಯವಸ್ಥೆಗೂ ಹಾನಿಯಾಗಲಿದೆ ಎಂದು ಮಾಜಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಢಿಯಲ್ಲಿಂದು ತಿಳಿಸಿ ದ್ದಾರೆ.

ಸರಕಾರ ಜಾರಿ ಮಾಡಲು ಹೊರಟಿರುವ ಎಪಿಎಂಸಿ ತಿದ್ದುಪಡಿ ಕಾಯಿದೆಯ ಪರಿಣಾ ಮವಾಗಿ ಅಕ್ರಮ ದಾಸ್ತಾನು ಮಾಡಿ ಮಾರುಕಟ್ಟೆಯಲ್ಲಿ ಕೃತಕ ಅಭಾವದ ಪರಿಸ್ಥಿತಿ ನಿರ್ಮಿಸಿ ಬೆಲೆ ಏರಿಕೆ ಉಂಟಾಗಬಹುದು. ರೈತರಿಂದ ಬೆಂಬಲ ಬೆಲೆ ನೀಡಿ ಖರೀದಿಸಲು ಆಹಾರ ನಿಗಮಕ್ಕೆ ಆಹಾರ ಸಾಮಾಗ್ರಿಗಳ ಕೊರತೆಯಾಗಬಹುದು. ಈ ರೀತಿಯ ಪರಿಸ್ಥಿತಿ ನಿರ್ಮಾಣ ವಾದರೆ ಪಡಿತರ ಅಂಗಡಿಗಳಿಗೆ ಆಹಾರ ಪೂರೈಕೆಯ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಇದು ಕೇವಲ ರೈತರ ಪ್ರಶ್ನೆಯಲ್ಲ ಭಾರತದ 134 ಕೋಟಿ ಜನರ ಬದುಕಿನ ಪ್ರಶ್ನೆ ಯಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ರೈತರ ನಿರ್ಲಕ್ಷ್ಯ, ಸರಕಾರ ಪತನದ ಸಂಕೇತ :- ದೇಶ ಕಂಡ ಮಹಾನ್ ಸಂತ ಸ್ವಾಮಿ ವಿವೇಕಾನಂದರು ಅಂದಂತೆ ಯಾವ ಸರಕಾರ ಜನ ಸಾಮಾನ್ಯರನ್ನು ನಿರ್ಲಕ್ಷ್ಯ ಮಾಡುತ್ತದೋ ಅದು ಆ ಸರಕಾರದ  ಪತನ ಸಂಕೇತ. ಅದೇ ರೀತಿ ದೇಶದಲ್ಲಿ ಕಳೆದ ಮೂರು ತಿಂಗಳು ಕಷ್ಟ, ನಷ್ಟ, ಸಾವು ನೋವುಗಳನ್ನು ಅನುಭವಿಸಿ ಹೋರಾಟ ಮಾಡುತ್ತಿರುವ ಸರಕಾರ ಪತನಗೊಳ್ಳುವ ಹಾದಿಯಲ್ಲಿ ಸಾಗುತ್ತಿದೆ. ಆದುದರಿಂದ ಈ ಪ್ರತಿಭಟನೆ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಯು.ಟಿ.ಖಾದರ್ ಟೀಕಿಸಿದ್ದಾರೆ.

ಸರಕಾರ ಶೈಕ್ಷಣಿಕ ಕ್ಷೇತ್ರ ವನ್ನು ನಿರ್ಲಕ್ಷ್ಯ ಮಾಡುತ್ತಿದೆ.ಅಗತ್ಯ ವಿರುವ ಅತಿಥಿ ಉಪನ್ಯಾಸ ಕರನ್ನು ನೇಮಿಸಲು ಕ್ರಮ ಕೈ ಗೊಂಡಿಲ್ಲ ಎಂದು ಟೀಕಿಸಿದ್ದಾರೆ.

ದೇಶದ ಭದ್ರತೆ ಯ ವಿಚಾರದ ಮಾಹಿತಿ ಅರ್ನಾಬ್ ಟಿ.ವಿ.ಚ್ಯಾನೆಲ್ ಮೂಲಕ ಬಹಿರಂಗ ಗೊಂಡ ಬಗ್ಗೆ ಸಮಗ್ರ ತನಿಖೆಯಾಗ ಬೇಕು ಎಂದು ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ,ಧರ್ಮ ಗಳ ನಡುವೆ ದ್ವೇಷ ಮೂಡಿಸುವ ಚಟುವಟಿಕೆ ಗುಪ್ತವಾಗಿ ನಡೆಯುತ್ತಿದೆ.ಈ ಕೃತ್ಯದ ಭಾಗವಾಗಿ ದೈವ ಸ್ಥಾನಗಳ ಕಾಣಿಕೆ ಹುಂಡಿ ಗಳನ್ನು ಅಪವಿತ್ರಗೊಳಿಸುವುದು, ಕೋಮು ದ್ವೇಷ ದ ಬರಹಗಳನ್ನು ಬರೆಯುವುದು ನಿರಂತರವಾಗಿ ನಡೆಯುತ್ತಿದೆ. ಈ ಕೃತ್ಯಗಳಿಗೆ ಶಾಶ್ವತ ಕಡಿವಾಣ ಹಾಕುವ ಕೆಲಸ ನಡೆಯಬೇಕಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಟಿ.ಕೆ.ಸುಧೀರ್, ಮುರ ಳೀಧರ್, ನೀರಜ್ ಪಾಲ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News