×
Ad

ಉಮರ್ ಪಜೀರ್ ನಿಧನಕ್ಕೆ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಸಂತಾಪ

Update: 2021-01-22 22:48 IST

ಮಂಗಳೂರು : ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಉಮರ್ ಪಜೀರ್ ನಿಧನಕ್ಕೆ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾಧ್ಯಕ್ಷ ಅಡ್ವೋಕೇಟ್ ಸರ್ಫರಾಝ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್  ಸಂತಾಪ ವ್ಯಕ್ತಪಡಿಸಿದ್ದಾರೆ.

ಉಮರ್ ಪಜೀರ್ ಅವರು ಒಬ್ಬ ಸಮಾಜ ಸೇವಕ ಹಾಗೂ ನಿಷ್ಠಾವಂತ ರಾಜಕಾರಣಿಯಾಗಿದ್ದು, ನೈಜ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಲ್ಲಿ ಉತ್ತಮ ಸಾಮುದಾಯಿಕ ಕಾಳಜಿಯನ್ನು ಕೂಡಾ ಕಾಣಬಹುದಾಗಿತ್ತು. ಅವರು ಜನರಲ್ಲಿ ಅನ್ಯೋನ್ಯತೆಯನ್ನು ಹೊಂದಿರುವ ವ್ಯಕ್ತಿತ್ವದವರಾಗಿದ್ದರು, ಅವರ ನಿಧನ ಸಮಾಜ ಮತ್ತು ಸಮುದಾಯಕ್ಕೆ ಒಂದು ದೊಡ್ಡ ನಷ್ಟವಾಗಿದೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News