ಶಿವಮೊಗ್ಗ ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟ : ಎಫ್.ಐ.ಟಿ.ಯು. ಖಂಡನೆ

Update: 2021-01-22 17:31 GMT

ಬೆಂಗಳೂರು : ಶಿವಮೊಗ್ಗದ ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟಕ ವಸ್ತುಗಳು ಸಿಡಿದ ಕಾರಣ 10ಕ್ಕೂ ಹೆಚ್ಚು ಬಡಕಾರ್ಮಿಕರು ಮೃತಪಟ್ಟಿರುವ ಘಟನೆಯನ್ನು ಎಫ್.ಐ.ಟಿ.ಯು. ರಾಜ್ಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪೆ ಖಂಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ. 

ಇಷ್ಟೊಂದು ಸಾವು ನೋವುಗಳಿಗೆ ಕಾರಣವಾದ ಆಡಳಿತ ವರ್ಗದ ಹೊಣೆಗೇಡಿತನಕ್ಕಾಗಿ ರಾಜ್ಯ ಸರ್ಕಾರವನ್ನು ಖಂಡಿಸಿದ ಅವರು, ಇದು ನಮ್ಮ ರಾಜ್ಯದ, ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಈ ಘಟನೆ ಸಂಭವಿಸಿದ್ದು, ಇಲ್ಲಿ ಯಾವುದೇ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳದೆ ಇಷ್ಟೊಂದು ಸ್ಪೋಟಕ ವಸ್ತುಗಳನ್ನು ಸಂಗ್ರಹಿಡಲು ಅನುಮತಿ ನೀಡಿದ ಸರಕಾರಿ ಅಧಿಕಾರಿಗಳು ಮಾತ್ರವಲ್ಲದೆ ಸ್ಥಳೀಯ ಶಾಸಕರೂ, ಸಚಿವರೂ ಆಗಿರುವ ಈಶ್ವರಪ್ಪನವರು ನೇರ ಹೊಣೆಯಾಗಿರುವ ಕಾರಣ ಇವರು ಕೇವಲ ಸಂತಾಪ ಸೂಚಿಸಿ ಪಲಾಯನ ಮಾಡಲಾಗದು, ಇವರಿಗೆ ಕಾರ್ಮಿಕರ ಬಗ್ಗೆ ನೈಜ ಕಾಳಜಿ ಮತ್ತು ರಾಜಕೀಯ ನೈತಿಕತೆ ಇದ್ದಲ್ಲಿ ಸಾವಿಗೀಡಾಗಿರುವ ಕಾರ್ಮಿಕರ ಕುಟುಂಬಕ್ಕೆ ಕಣ್ಣೊರೆಸುವ ಪ್ರಹಸನ ಮಾಡದೆ ಸರಿಯಾದ ಪರಿಹಾರ ಒದಗಿಸಿ  ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News