IAS ಪರೀಕ್ಷೆ ಬರೆಯುವವರಿಗೆ ತರಬೇತಿ ನೀಡುತ್ತಿರುವ 13ರ ಹರೆಯದ ಪೋರ!

Update: 2021-01-23 13:08 GMT
photo: indianexpress.com

ಹೊಸದಿಲ್ಲಿ,ಜ.23: ಭಾರತದ ಅತ್ಯಂತ ಖ್ಯಾತ ಹಾಗೂ ಅತ್ಯಂತ ಕಿರಿಯ ಯೂಟ್ಯೂಬರ್ ಗಳಲ್ಲೊಬ್ಬಾತ  13 ವರ್ಷದ ಅಮರ್ ಸಾತ್ವಿಕ್ ತೋಗಿತಿ. ತೆಲಂಗಾಣದ ಮಂಚೇರಿಯಲ್ ಎಂಬ ಪುಟ್ಟ ಊರಿನ ಈ ಬಾಲಕ ಇಷ್ಟು ಸಣ್ಣ ಪ್ರಾಯದಲ್ಲಿಯೇ  ಸಿವಿಲ್ ಸರ್ವಿಸಸ್ ಆಕಾಂಕ್ಷಿಗಳಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಹಕಾರಿಯಾಗುವ ವೀಡಿಯೋಗಳನ್ನು ಪ್ರಸ್ತುತಪಡಿಸಿ ಹಲವಾರು ಮಂದಿಗೆ ನೆರವಾಗುತ್ತಿದ್ದಾನೆ. ಈತ `ಲರ್ನ್ ವಿದ್ ಅಮರ್' ಎಂಬ ಯುಟ್ಯೂಬ್ ಚಾನೆಲ್ ಅನ್ನು 2016ರಲ್ಲಿ  ಕೇವಲ 10 ವರ್ಷದವನಿರುವಾಗ ಆರಂಭಿಸಿದ್ದ. ಈಗ ಆತನ ಚಾನೆಲ್‍ಗೆ 1.87 ಲಕ್ಷ ಚಂದಾದಾರರಿದ್ದಾರೆ.

ಸರಕಾರಿ ಶಾಲಾ ಶಿಕ್ಷಕರೂ  ಶಿಕ್ಷಕರ ತರಬೇತಿ ಸಂಪನ್ಮೂಲ ವ್ಯಕ್ತಿಯೂ ಆಗಿರುವ ತನ್ನ ತಂದೆ ಗೋವರ್ಧನ್ ಆಚಾರಿ ತೋಗಿತಿಯಿಂದ ಕೆಲವೊಂದು ವಿಚಾರಗಳನ್ನು ತಾನು ಕಲಿತಿರುವುದಾಗಿ ಆತ ತಿಳಿಸುತ್ತಾನೆ.

ತಾನು ಐದನೇ ತರಗತಿಯಲ್ಲಿದ್ದಾಗಿನಿಂದ ಅಟ್ಲಾಸ್ ನೋಡುವುದೆಂದರೆ ತನಗಿಷ್ಟವಾಗಿತ್ತು ಎಂದು ಹೇಳುವ ಅಮರ್, ತಂದೆ ತನ್ನ ಆಸಕ್ತಿಯನ್ನು ಗಮನಿಸಿ ತನಗೆ ಭೂಗೋಳಶಾಸ್ತ್ರ ಕಲಿಸಲು ಆರಂಭಿಸಿದ್ದರು. ಒಮ್ಮೆ ಹೀಗೆಯೇ ನಾನೇ ಒಂದು ತರಗತಿ ತೆಗೆದುಕೊಳ್ಳುವಂತೆ ನಟಿಸಿದಾಗ ತಾಯಿ ಅದರ ವೀಡಿಯೋ ರೆಕಾರ್ಡ್ ಮಾಡಿ ಅಪ್‍ಲೋಡ್ ಮಾಡಿದಾಗ ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು, ಇದರ ನಂತರ ವೀಡಿಯೋಗಳನ್ನು ಸಿದ್ಧಪಡಿಸಿ ಅಪ್‍ಲೋಡ್ ಮಾಡಲು ಆರಂಭಿಸಿದ್ದೆ" ಎಂದು ಆತ ಹೇಳುತ್ತಾನೆ.

ಭೂಗೋಳಶಾಸ್ತ್ರ ಪಾಠಗಳ ವೀಡಿಯೋ ಮೂಲಕ  ಚಾನೆಲ್ ಆರಂಭಿಸಿದ್ದ ಆತ ಮುಂದೆ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಚಾರಗಳ ವೀಡಿಯೋಗಳನ್ನೂ ತಯಾರಿಸುವ ಉದ್ದೇಶ ಹೊಂದಿದ್ದಾನೆ.

ಮುಂದೆ ಐಎಎಸ್ ಅಧಿಕಾರಿಯಾಗಿ ಭ್ರಷ್ಟಾಚಾರ ನಿರ್ಮೂಲನೆಗೊಳಿಸುವ ಉದ್ದೇಶ ಈತನಿಗಿದೆ. ಅಮರ್ ನ ಕಿರಿಯ ಸೋದರ, ಹತ್ತು ವರ್ಷದ ಅನಘ್ ವಿಘ್ನೇಶ್ ಕೂಡ ಅಣ್ಣನ ಚಾನೆಲ್‍ನಲ್ಲಿ ತನ್ನ 10ರಿಂದ 13 ವೀಡಿಯೋ ಅಪ್‍ಲೋಡ್ ಮಾಡಿದ್ದಾನೆ.

ಪುಸ್ತಕಗಳನ್ನು ಓದುವುದು ಅಮರ್ ನ  ಹವ್ಯಾಸಗಳಲ್ಲೊಂದಾಗಿದ್ದು ʼದಿ ಬ್ರೀಫ್ ಹಿಸ್ಟರಿ ಆಫ್ ಟೈಮ್ʼ ಹಾಗೂ ʼದಿ ಆಲ್ಕೆಮಿಸ್ಟ್ʼ ಆತನ ಅಚ್ಚುಮೆಚ್ಚಿನ ಕೃತಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News