ಯೆನಪೋಯದಲ್ಲಿ ಪ್ರೋಸ್ತೊಡಾಂಟಿಸ್ಟ್ ದಿನಾಚರಣೆ

Update: 2021-01-23 18:18 GMT

ಕೊಣಾಜೆ: ಯೆನೆಪೋಯ  ದಂತ ಕಾಲೇಜಿನ ಪ್ರೋಸ್ತೊಡಾಂಟಿಸ್ಟ್ ವಿಭಾಗ ವತಿಯಿಂದ ಶುಕ್ರವಾರ ‘ಪ್ರೋಸ್ತೊಡಾಂಟಿಸ್ಟ್ ದಿನಾಚರಣೆಯು ನಡೆಯಿತು.
ಕಾರ್ಯಕ್ರಮವನ್ನು ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶ್ರೀಪತಿ ರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರೋಸ್ತೊಡಾಂಟಿಸ್ಟ್ ವಿಭಾಗದಲ್ಲಿ ಕೃತಕ ಹಲ್ಲಿನ ವಿಶೇಷ ತರಬೇತಿ ಪಡೆದ ತಜ್ಞರಿದ್ದು, ಈ ತಜ್ಞರಿಂದ ಇಂದು ಸಮಾಜದ ಬಹಳಷ್ಟು ಜನರು ಉಪಯೋಗ ಪಡೆಯುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಪುಟಗಳನ್ನು ಉದ್ಘಾಟಿಸಲಾಯಿತು. ಹಾಗೂ  ಹಲ್ಲು ಇಲ್ಲದ ಹಿರಿಯರಿಗೆ ಉಚಿತವಾಗಿ ದಂತ ಪಂಕ್ತಿಗಳನ್ನು ವಿತರಿಸಲಾಯಿತು. 

ಈ ದಿನದ ಅಂಗವಾಗಿ ಗಿಡವನ್ನು ನೆಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಾಷಣ ಮತ್ತು ಪೋಸ್ಟರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಖ್ತರ್ ಹುಸೈನ್, ವಿಭಾಗದ ಮುಖ್ಯಸ್ಥರಾದ ಡಾ. ಸನತ್ ಶೆಟ್ಟಿ ಹಾಗೂ ದಂತ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News