ಪತ್ನಿಯ ಕೊಲೆಯತ್ನ-ಕಿರುಕುಳ ಆರೋಪ: ದೂರು ದಾಖಲಾದ ಬೆನ್ನಲ್ಲೇ ಮೂಡ ಆಯುಕ್ತ ನಾಪತ್ತೆ?

Update: 2021-01-24 15:07 GMT
ಜಿ.ಟಿ. ದಿನೇಶ್ ಕುಮಾರ್

ಮಂಗಳೂರು, ಜ.24: ಪತ್ನಿಗೆ ಕಿರುಕುಳ ನೀಡಿದ ಹಾಗೂ ಕೊಲೆಯತ್ನ ಆರೋಪ ಎದುರಿಸುತ್ತಿರುವ ಕೆಎಎಸ್ ಅಧಿಕಾರಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತ ಜಿ.ಟಿ. ದಿನೇಶ್ ಕುಮಾರ್ (38) ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದಿನೇಶ್ ಕುಮಾರ್ ಮೂಡ ಆಯುಕ್ತರಾಗಿ ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಮಂಗಳೂರಿನ ಉರ್ವ ಮಾರ್ಕೆಟ್ ಬಳಿಯ ಅಗ್ರಜ ವಿವಾಂಟ ಫ್ಲಾಟ್‌ನಲ್ಲಿ ಇವರು ವಾಸವಿದ್ದರು. ಪತ್ನಿ ಬೆಂಗಳೂರಿನಲ್ಲಿ ಇದ್ದುದರಿಂದ ಇವರು ಒಬ್ಬರೇ ಇಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ.

ಪತ್ನಿ ದೀಪ್ತಿ ಅವರು ಕೊಲೆಯತ್ನ ಹಾಗೂ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದರಿಂದ ದಿನೇಶ್‌ಕುಮಾರ್ ದಿಢೀರ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಹಗಲು ವೇಳೆ ಕಚೇರಿಗೆ ಬಂದಿದ್ದ ದಿನೇಶ್ ಕುಮಾರ್ ರಾತ್ರಿಯಿಂದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಎರಡನೇ ಶನಿವಾರ ರಜೆ ಇದ್ದು, ರವಿವಾರ ರಜೆ. ಹೀಗಾಗಿ ಅವರು ಬೆಂಗಳೂರಿಗೆ ಹೋಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆದರೆ ಮೂಡ ಅಧ್ಯಕ್ಷರ ಸೇರಿದಂತೆ ಯಾರು ಕರೆ ಮಾಡಿದರೂ ದಿನೇಶ್ ಕುಮಾರ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಮೂಲತಃ ದಾವಣಗೆರೆಯವರಾದ ಇವರು 2012ರ ಕೆಎಎಸ್ ಬ್ಯಾಚ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News