ಕುಟುಂಬದ ಒಬ್ಬ ಸದಸ್ಯ ರಾಜಕೀಯದಲ್ಲಿರಬೇಕೆಂದು ಕೇಂದ್ರ ಕಾನೂನು ತಂದರೆ ರಾಜಕೀಯ ತ್ಯಜಿಸುವೆ: ಅಭಿಷೇಕ್ ಬ್ಯಾನರ್ಜಿ

Update: 2021-01-24 16:22 GMT

ಕೋಲ್ಕತಾ: ನನ್ನ ವಿರುದ್ಧ ಹೊರಿಸಲಾಗಿರುವ ಭ್ರಷ್ಟಾಚಾರ ಆರೋಪವನ್ನು ಸಾಬೀತುಪಡಿಸಿದರೆ, ಸಾರ್ವಜನಿಕವಾಗಿ ನೇಣಿಗೆ ಶರಣಾಗುವೆ ಎಂದು ತನ್ನ ರಾಜಕೀಯ ವಿರೋಧಿಗಳಿಗೆ ಸವಾಲೆಸೆದ  ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಅಳಿಯ, ಹಾಲಿ ಸಂಸದ ಅಭಿಷೇಕ್ ಬ್ಯಾನರ್ಜಿ ಕುಟುಂಬದ ಓರ್ವ ಸದಸ್ಯ ಮಾತ್ರ ರಾಜಕೀಯದಲ್ಲಿರಬೇಕೆಂದು ಕೇಂದ್ರ ಸರಕಾರ ಕಾನೂನು ತಂದರೆ ನಾನು ರಾಜಕೀಯವನ್ನು ತ್ಯಜಿಸುತ್ತೇನೆ ಎಂದು ಹೇಳಿದ್ದಾರೆ.

ಡೈಮಂಡ್ ಹರ್ಬರ್ ಸಂಸದ ಬ್ಯಾನರ್ಜಿ, ಕುಲ್ಟಾಲಿ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುಟುಂಬದಿಂದ ಒಂದಕ್ಕಿಂತ ಹೆಚ್ಚು ಜನರು ಸಕ್ರಿಯ ರಾಜಕಾರಣದಲ್ಲಿರಬಾರದು ಎಂದು ಕಾನೂನು ತಂದರೆ ತಕ್ಷಣವೇ ನಾನು ರಾಜಕೀಯ ತ್ಯಜಿಸುವೆ. ಕೈಲಾಶ್ ವಿಜಯ ವರ್ಗೀಯರಿಂದ ಸುವೇಂಧು ಅಧಿಕಾರಿ, ಮುಕುಲ್ ರಾಯ್ ಅವರಿಂದ ರಾಜ್ ನಾಥ್ ಸಿಂಗ್  ಕುಟುಂಬದ ಇತರ ಸದಸ್ಯರು ಬಿಜೆಪಿಯ ಪ್ರಮುಖ ಹುದ್ದೆ ಆಕ್ರಮಿಸಿಕೊಂಡಿದ್ದಾರೆ. ಸಕ್ರಿಯ ರಾಜಕೀಯದಲ್ಲಿ ಕುಟುಂಬದ ಓರ್ವ ಸದಸ್ಯನಿರಬೇಕೆಂದು ಕಾನೂನು ತಂದರೆ, ಟಿಎಂಸಿಯಲ್ಲಿ ನಮ್ಮ ಕುಟುಂಬದಿಂದ ಮಮತಾ ಬ್ಯಾನರ್ಜಿ ಮಾತ್ರ ಇರುತ್ತಾರೆ ಎಂದು ನಾನು ಭರವಸೆ ನೀಡುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News