ಟರ್ಕಿ ಹಡಗಿನ ಮೇಲೆ ಕಡಲ್ಗಳ್ಳರ ದಾಳಿ; ಓರ್ವ ಸಿಬ್ಬಂದಿ ಹತ್ಯೆ

Update: 2021-01-24 17:32 GMT

ಅಂಕಾರ (ಟರ್ಕಿ), ಜ. 24: ಪಶ್ಚಿಮ ಆಫ್ರಿಕದ ಕರಾವಳಿಯಲ್ಲಿ ಕಡಲ್ಗಳ್ಳರು ಟರ್ಕಿಯ ಸರಕು ಹಡಗೊಂದರ ಮೇಲೆ ದಾಳಿ ನಡೆಸಿದ್ದು, ಓರ್ವ ಸಿಬ್ಬಂದಿಯನ್ನು ಕೊಂದು 15 ಮಂದಿಯನ್ನು ಅಪಹರಿಸಿದ್ದಾರೆ. ರವಿವಾರ ರಕ್ಷಣಾ ಕಾರ್ಯಾಚರಣೆ ನಡೆಸಲು ಟರ್ಕಿ ಸೇನೆ ಯೋಜನೆಯೊಂದನ್ನು ರೂಪಿಸಿದೆ.

ಹಡಗಿನ ಸಿಬ್ಬಂದಿ ಆರಂಭದಲ್ಲಿ ಹಡಗಿನ ಸುರಕ್ಷಿತ ಪ್ರದೇಶದಲ್ಲಿ ಕುಳಿತು ಬಾಗಿಲು ಹಾಕಿಕೊಂಡರು. ಆದರೆ, ಆರು ಗಂಟೆಗಳ ಬಳಿಕ ಕಡಲ್ಗಳ್ಳರು ಬಾಗಿಲು ಮುರಿದು ಒಳಬಂದರು ಎಂದು ಟರ್ಕಿಯ ಸಮುದ್ರಯಾನ ನಿರ್ದೇಶನಾಲಯ ತಿಳಿಸಿದೆ.

ಆಗ ಸಂಭವಿಸಿದ ಘರ್ಷಣೆಯಲ್ಲಿ ಹಡಗಿನ ಓರ್ವ ಸಿಬ್ಬಂದಿ ಮೃತಪಟ್ಟರು.

ಶನಿವಾರ ಹೆಚ್ಚಿನ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡ ಬಳಿಕ, ಕಳ್ಳರು ಹಡಗನ್ನು ಮೂರು ಸಿಬ್ಬಂದಿಯೊಂದಿಗೆ ಗಿನಿ ಕೊಲ್ಲಿಯಲ್ಲಿ ಇರಿಸಿದರು. ಈಗ ಹಡಗು ಗ್ಯಾಬನ್‌ನ ಗೆಂಟಿಲ್ ಬಂದರಿನತ್ತ ಚಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News