ಗಡಿ ಬಿಕ್ಕಟ್ಟಿನ ನಡುವೆ 9ನೇ ಸುತ್ತಿನ ಸೇನಾ ಮಾತುಕತೆ ನಡೆಸಿದ ಭಾರತ, ಚೀನಾ

Update: 2021-01-24 18:53 GMT

ಹೊಸದಿಲ್ಲಿ, ಜ. 24: ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ನಿವಾರಿಸಲು ಹಾಗೂ ಬಿಕ್ಕಟ್ಟಿನ ಅಂತ್ಯಕ್ಕೆ ಪರಿಹಾರ ಕಂಡು ಹುಡುಕಲು ಭಾರತ ಹಾಗೂ ಚೀನಾದ ಸೇನಾ ಕಮಾಂಡರ್‌ಗಳು ರವಿವಾರ 9ನೇ ಸುತ್ತಿನ ಮಾತುಕತೆ ನಡೆಸಿದರು.

ಕೊನೆಯ ಸುತ್ತಿನ ಮಾತುಕತೆಯಲ್ಲಿ ಭಾರತೀಯ ಸೇನೆ ಪೂರ್ವ ಲಡಾಖ್‌ನ ಘರ್ಷಣೆಯ ಎಲ್ಲಾ ಕೇಂದ್ರಗಳಿಂದ ಚೀನಾ ತನ್ನ ಸೇನೆಯನ್ನು ಆದಷ್ಟು ಬೇಗ ಹಿಂದೆಗೆಯುವಂತೆ ಬಲವಾಗಿ ಸೂಚಿಸಿತು.

ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಚೀನಾ ಭಾಗದಲ್ಲಿರುವ ಮೋಲ್ಡೋ ಗಡಿ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ಇಂದಿನ ಸೇನಾ ಮಾತುಕತೆ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ.

8ನೇ ಹಾಗೂ ಕಳೆದ ಸುತ್ತಿನ ಸೇನಾ ಮಾತುಕತೆ ನವೆಂಬರ್ 6ರಂದು ನಡೆದಿತ್ತು. ಈ ಸಂದರ್ಭ ನಿರ್ದಿಷ್ಟ ಘರ್ಷಣೆಯ ಕೇಂದ್ರದಿಂದ ಸೇನೆ ಹಿಂದೆಗೆಯುವ ಬಗ್ಗೆ ಉಭಯ ರಾಷ್ಟ್ರಗಳು ಚರ್ಚೆ ನಡೆಸಿದ್ದವು. ಮಾತುಕತೆಯಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ಲೇಹ್ ಮೂಲದ 14 ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News