ಬೋಟ್ ಸವಾರಿಯ ವೇಳೆ ಪಕ್ಷಿಗೆ ಆಹಾರ ತಿನ್ನಿಸಿದ ಶಿಖರ್ ಧವನ್: ಬೋಟ್ ಮ್ಯಾನ್ ಗೆ ಸಂಕಟ

Update: 2021-01-25 06:01 GMT

ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯಲ್ಲಿ ಬೋಟ್ ಸವಾರಿಯ ವೇಳೆ ಪಕ್ಷಿಗಳಿಗೆ ಆಹಾರ ತಿನ್ನಿಸುವ ಫೋಟೊವನ್ನು ಕ್ರಿಕೆಟಿಗ ಶಿಖರ್ ಧವನ್  ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದರಿಂದಾಗಿ ಬೋಟ್ ಮ್ಯಾನ್ ಸಮಸ್ಯೆಗೆ ಸಿಲುಕುವಂತಾಗಿದೆ.

ಇನ್ ಸ್ಟಾಗ್ರಾಮ್ ನಲ್ಲಿ ಬೋಟ್ ನಲ್ಲಿ ಸವಾರಿ ಮಾಡಿದ ಫೋಟೊಗಳನ್ನು ಹಂಚಿಕೊಂಡಿರುವ ಧವನ್, ಹಕ್ಕಿ ಗಳಿಗೆ ಆಹಾರ ತಿನ್ನಿಸುವದುಕ್ಕೆ ಸಂತೋಷವಾಗುತ್ತಿದೆ ಎಂದು ಬರೆದಿದದರು.

ಆಡಳಿತದ ಮಾರ್ಗಸೂಚಿಗಳನ್ನು ಪಾಲಿಸದ ಬೋಟ್ ಮ್ಯಾನ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಹಕ್ಕಿ ಜ್ವರ ಭೀತಿ ಇರುವಾಗ ತನ್ನ ಬೋಟ್ ನಲ್ಲಿ ಪ್ರವಾಸಿಗರಿಗೆ ಹಕ್ಕಿಗಳಿಗೆ ಆಹಾರ ತಿನ್ನಿಸಲು ಅವಕಾಶ ನೀಡಿರುವ ಬೋಟ್‍ಮ್ಯಾನ್ ನಿಯಮ ಉಲ್ಲಂಘಿಸಿದ್ದಾರೆ. ಪ್ರವಾಸಿಗರು-ಈ ಘಟನೆಯಲ್ಲಿ ಶಿಖರ್ ಧವನ್ ವಿರುದ್ಧ ಯಾವುದೇ ಕ್ರಮ ಎದುರಿಸುವುದಿಲ್ಲ ಎಂದು ವಾರಾಣಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

ಕೆಲವು ಬೋಟ್ ಮ್ಯಾನ್ ಗಳು ಆಡಳಿತದ ಸೂಚನೆಗಳನ್ನು ಪಾಲಿಸುತ್ತಿಲ್ಲ ಎಂಬ ಮಾಹಿತಿ ಲಭಿಸಿದೆ. ಬೋಟ್ ನಲ್ಲಿರುವ ಪ್ರವಾಸಿಗರು ಹಕ್ಕಿಗಳಿಗೆ ಆಹಾರ ತಿನ್ನಿಸುತ್ತಾರೆ. ಇಂತಹ ಬೋಟ್ ಮ್ಯಾನ್ ಗಳನ್ನು ಗುರುತಿಸಲಾಗುವುದು. ಸಾಮಾನ್ಯವಾಗಿ ಪ್ರವಾಸಿಗರಿಗೆ ಈ ಕುರಿತು ಅರಿವು ಇರುವುದಿಲ್ಲ ಎಂದು ಶರ್ಮಾ ಎಎನ್ ಐಗೆ ತಇಳಿಸಿದರು.

ಛತ್ತಿಸ್ ಗಢ, ಹರ್ಯಾಣ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಬ್ ಸಹಿತ 6 ರಾಜ್ಯಗಳಲ್ಲಿ ಹಕ್ಕಿ ಜ್ವರ ಖಚಿತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News