'ಡಿ ಗ್ರೂಪ್ ಶೈನ್ ಅಟ್ಯಾಕರ್ಸ್ ವಿಟ್ಲ-ಕಡಂಬು' ಕ್ರಿಕೆಟ್ ತಂಡದ ನೂತನ ಜೆರ್ಸಿ ಬಿಡುಗಡೆ

Update: 2021-01-26 11:52 GMT

ವಿಟ್ಲ: ಜ.26ರಂದು ನಡೆಯಲಿರುವ 2021- 2022 ರ ಸಾಲಿನ ಬುಳ್ಳೇರಿಕಟ್ಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ‘ಡಿ ಗ್ರೂಪ್ ಶೈನ್ ಅಟ್ಯಾಕರ್ಸ್ ವಿಟ್ಲ-ಕಡಂಬು’ ತಂಡದ ನೂತನ ಜೆರ್ಸಿ ಲೋಕಾರ್ಪಣೆ ಕಾರ್ಯಕ್ರಮವು ನಿಝಾರ್ ವಿ.ಎಸ್ ಕಡಂಬು ಅವರ ನಿವಾಸದಲ್ಲಿ ನಡೆಯಿತು.

ಡಿ ಗ್ರೂಪ್ ವಿಟ್ಲ ಇದರ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ನೂತನ ಜೆರ್ಸಿ ಬಿಡುಗಡೆಗೊಳಿಸಿದರು. 

ಕಾರ್ಯಕ್ರಮದಲ್ಲಿ ಎಸ್ ಡಿಪಿಐ ಪುತ್ತೂರು ತಾಲೂಕು ಸಮಿತಿ ಸದಸ್ಯ ಶಾಕಿರ್ ಅಳಕೆಮಜಲು, ಪತ್ರಕರ್ತ ಮಹಮ್ಮದಲಿ ವಿಟ್ಲ,  ತಂಡದ ಮ್ಯಾನೇಜರ್ ಶಾಫಿ ವಿಟ್ಲ, ಉದ್ಯಮಿ ಜಮಾಲ್ ಬೆಂಗಳೂರು ಹಾಗೂ ನ್ಯೂ ಶೈನ್ ಕಡಂಬು ಇದರ ವ್ಯವಸ್ಥಾಪಕರಾದ ಸಿರಾಜ್ ಕಡಂಬು, ನೌಶಾದ್ ಕಡಂಬು, ತಂಡದ ಸದಸ್ಯ ನಾಶ್ವಿ ಕಡಂಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News