ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬುಗೆ ಮಹಾವೀರ ಚಕ್ರ ಪ್ರಶಸ್ತಿ
Update: 2021-01-25 21:29 IST
ಹೊಸದಿಲ್ಲಿ: ಕಳೆದ ವರ್ಷ ಮೇ ನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಕರ್ನಲ್ ಸಂತೋಷ್ ಬಾಬು ಅವರಿಗೆ ಮರಣೋತ್ತರ 'ಮಹಾವೀರ ಚಕ್ರ' ಪ್ರಶಸ್ತಿ ಘೋಷಣೆಯಾಗಿದೆ.
ಕ.ಸಂತೋಷ್ ಬಾಬು ಅವರಿಗೆ 'ಮಹಾವೀರ ಚಕ್ರ'ವಲ್ಲದೆ 4ನೇ ಪ್ಯಾರಾಚ್ಯೂಟ್ ರೆಜಿಮೆಂಟ್ ನ ಸಬ್ ಸಂಜೀವ್ ಕುಮಾರ್ ಗೆ 'ಕೀರ್ತಿ ಚಕ್ರ', ಇತರ ಐವರು ಸೈನಿಕರಿಗೆ 'ವೀರ ಚಕ್ರ' ಪ್ರಶಸ್ತಿ ನೀಡಿ ರಾಷ್ಟ್ರಪತಿ ಗೌರವಿಸಲಿದ್ದಾರೆ. ರಾಷ್ಟ್ರದ ಸೇವೆಗಾಗಿ ಮೂವರು ಸೈನಿಕರನ್ನು 'ಶೌರ್ಯ ಚಕ್ರ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.