ಮೀನುಗಾರರ ಸಾಲ ಮನ್ನಾ ಮೊತ್ತ ಬ್ಯಾಂಕ್ ಖಾತೆಗೆ ವರ್ಗಾವಣೆ

Update: 2021-01-25 16:11 GMT

ಉಡುಪಿ, ಜ.25: ಮೀನುಗಾರರು ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲಕ ಶೇ.2ರ ಬಡ್ಡಿದರದಲ್ಲಿ 2017-18 ಹಾಗೂ 2018-19ನೇ ಸಾಲಿನಲ್ಲಿ ಮತ್ತು ಶೂನ್ಯ ಬಡ್ಡಿದರದಲ್ಲಿ 2018-19ನೇ ಸಾಲಿನಲ್ಲಿ ಪಡೆದ ಸಾಲ ಮರುಪಾವತಿಗೆ ಬಾಕಿ ಇರುವ ಮೊತ್ತವನ್ನು ರಾಜ್ಯ ಸರಕಾರ ಮನ್ನಾ ಮಾಡಿದ್ದು, ಭೂಮಿಕೋಶದಲ್ಲಿ ಸಿದ್ಧ ಪಡಿಸಿದ ಹಸಿರು ಪಟ್ಟಿ ಪ್ರಕಾರ ಕೆಲವು ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ ವರ್ಗಾವಣೆಯಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರೆ ಸಾಲ ಖಾತೆಗೆ ಪಾವತಿಯಾಗದೇ ಹಿಂದಿರುಗಿ ಬಂದ ಫಲಾನುಭವಿ ಗಳಿಗೆ ಸಂಬಂಧಿಸಿ ಮತ್ತು ಆಧಾರ್ ದೃಢೀಕೃತಗೊಂಡು ಆಧಾರ್ ಖಾತೆಯ ಲ್ಲಿರುವ ಹೆಸರು ತಾಳೆಯಾಗದಿರುವವರ, ಅಲ್ಲದೇ ಇನ್ನಿತರ ನಿಯಮಾನುಸಾರ ಸಾಲಮನ್ನಾ ಪ್ರಯೋಜನ ಪಡೆಯಲು ಅರ್ಹರಿರುವ ಫಲಾನುಭವಿಗಳ ಕುರಿತು ಕ್ರಮ ವಹಿಸುವ ಬಗ್ಗೆ ವೇಳಾಪಟ್ಟಿ ಮತ್ತು ಮಾರ್ಗಸೂಚಿಗಳನ್ನು ಮೀನುಗಾರಿಕಾ ನಿರ್ದೇಶನಾಲಯ ಹೊರಡಿಸಿದೆ.
ಅದರಂತೆ ಈ ಮಾಹಿತಿಯನ್ನು ಫಲಾನುಭವಿಗಳು ಮತ್ತು ಬ್ಯಾಂಕ್ ಶಾಖೆಗಳ ಮ್ಯಾನೇಜರ್‌ಗಳಿಗೆ ನೀಡಲಾಗಿದೆ. ಹಸಿರು ಪಟ್ಟಿ ಆಗದ ಫಲಾನುಭವಿಗಳ ಪಟ್ಟಿಗಾಗಿ ಇಲಾಖೆಯ ವೆಬ್‌ಸೈಟ್ -fisheries.karnataka.gov.in-ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News