ವಿಶ್ವಸಂಸ್ಥೆಯ ಆರ್ಥಿಕ ಸಲಹಾ ಸಮಿತಿಗೆ ಜಯತಿ ಘೋಷ್ ನೇಮಕ

Update: 2021-01-25 18:08 GMT
photo: twitter

ನ್ಯೂಯಾರ್ಕ್, ಜ. 25: ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಎರಡನೇ ಉನ್ನತ ಮಟ್ಟದ ಸಲಹಾ ಮಂಡಳಿಗೆ ಭಾರತೀಯ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್‌ರನ್ನು ನೇಮಿಸಲಾಗಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯು 20 ಸದಸ್ಯರ ಸಮಿತಿಯನ್ನು ರಚಿಸಿದ್ದು, 65 ವರ್ಷದ ಜಯತಿಯೂ ಸ್ಥಾನ ಪಡೆದಿದ್ದಾರೆ.

ಈ ಸಮಿತಿಯು, ಕೋವಿಡ್-19ರ ನಂತರದ ಜಗತ್ತಿನ ಹಾಲಿ ಮತ್ತು ಭವಿಷ್ಯದ ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವ ವಿಚಾರದಲ್ಲಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಗೆ ಸಲಹೆಗಳನ್ನು ನೀಡಲಿದೆ.

ಅವರು ಮ್ಯಾಸಚೂಸಿಟ್ಸ್ ಆ್ಯಮ್‌ಹರ್ಸ್ಟ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ. ಅವರು ಹೊಸದಿಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಸುಮಾರು 35 ವರ್ಷಗಳ ಕಾಲ ಅರ್ಥಶಾಸ್ತ್ರ ಕಲಿಸಿದ್ದಾರೆ. ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News