×
Ad

ಯುಎಇಯಲ್ಲಿ ರಾಯಭಾರ ಕಚೇರಿ ತೆರೆದ ಇಸ್ರೇಲ್

Update: 2021-01-25 23:49 IST

ಜೆರುಸಲೇಮ್, ಜ. 25: ಇಸ್ರೇಲ್ ರವಿವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ತನ್ನ ರಾಯಭಾರ ಕಚೇರಿಯನ್ನು ತೆರೆದಿದೆ ಎಂದು ಇಸ್ರೇಲ್ ವಿದೇಶ ಸಚಿವಾಲಯ ತಿಳಿಸಿದೆ.

 ಇಸ್ರೇಲ್ ಮತ್ತು ಯುಎಇಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ತಿಂಗಳ ಬಳಿಕ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ.

‘‘ಇಂದು ಯುಎಇ ರಾಜಧಾನಿ ಅಬುಧಾಬಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿಯನ್ನು ಅಧಿಕೃತವಾಗಿ ತೆರೆಯಲಾಗಿದೆ. ಇಸ್ರೇಲ್ ರಾಯಭಾರಿ ಐಟಾನ್ ನೇಹ್ ತನ್ನ ಯುಎಇ ಕಚೇರಿಗೆ ಆಗಮಿಸಿದರು’’ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News